ಬಳ್ಳಾರಿ: ಟ್ರೇಡೆಷನಲ್ ಶೋಟೋಖಾನ್ ಕರಾಟೆ ಅಕಾಡೆಮಿ, ಕರ್ನಾಟಕ ಮತ್ತು ರಾಜ್ಯ ಕರಾಟೆ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಎರಡನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯನ್ನು ಆಗಸ್ಟ್ 26, 27 ಎರಡು ದಿನಗಳ ಕಾಲ ಬಳ್ಳಾರಿ ನಗರದ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾಗಿದೆ.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ
ಶೋಟೋಖಾನ್ ಕರಾಟೆ ಅಕಾಡೆಮಿ ಅಧ್ಯಕ್ಷರಾದ ಕಟ್ಟೆಸ್ವಾಮಿ, ಇಂದು ನಗರದ ಈ ಪಂದ್ಯಾವಳಿಯಲ್ಲಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಗೋವಾ, ತೆಲಂಗಾಣ, ಆಂಧ್ರಪ್ರದೇಶ, ಕೇರಳ,ಮತ್ತು ಒಡಿಶಾದಿಂದ 800ಕ್ಕು ಹೆಚ್ಚು ಬಾಲಕ ಬಾಲಕಿಯರು ಭಾಗವಹಿಸಲಿದ್ದಾರೆ ಎಂದರು.
ಈಗಾಗಲೇ ಸ್ಪರ್ಧೆಯಲ್ಲಿ ಭಾಗವಹಿಸುವ ಕರಾಟೆ ಕ್ರೀಡಾಪಟುಗಳಿಗೆ ಊಟ ಮತ್ತು ವಸತಿಯನ್ನು ವ್ಯವಸ್ಥೆಗಳಿಗೆ ಸಿದ್ದತೆ ಮಾಡಲಾಗಿದೆ. ಬಾಲಕ / ಬಾಲಕಿಯರ ವಿಭಾಗದ ವಯೋಮಿತಿಯಲ್ಲಿ ಕಟಾ (imagination Fight) ಮತ್ತು ವಯೋಮಿತಿ ಮತ್ತು ತೂಕದ ವಿಭಾಗದಲ್ಲಿ ಕುಮಿತ (Fight), ಗುಂಪು ಕಟಾ.(Team Kata), ಗುಂಪು ಕುಮಿತ.(Team Fight), ನಡೆಯಲಿವೆ. ನಿರ್ಣಾಯಕರಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಿರಿಯ ತೀರ್ಪುಗಾರರು ಆಗಮಿಸಲಿದ್ದಾರೆ. ಈ ಕರಾಟೆ ಪಂದ್ಯಾವಳಿಯಲ್ಲಿ ಪ್ರಥಮ, ದ್ವೀತೀಯ ಮತ್ತು ವಿಶೇಷವಾಗಿ ಎರಡು ತೃತೀಯ ಪ್ರಶಸ್ತಿಗಳಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕರಾಟೆ ಸಂಘದ ಶಿಕ್ಷಕರ ಸಂಘದ ಅಧ್ಯಕ್ಷ ಮಹಮ್ಮದ್ ನದೀಮ್, ಪ್ರಧಾನ ಕಾರ್ಯದರ್ಶಿ ಸತೀಶ್ ಬೆಳಮಣ್ಣು ಉಡುಪಿ, ಕೋಶಾಧಿಕಾರಿ ರವಿ ತಾಲಿಯಾನ್, ಬಳ್ಳಾರಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್, ಕರಾಟೆ ಅಕಾಡೆಮಿಯ ಪದಾಧಿಕಾರಿಗಳಾದ ಜಡೇಶ್, ಹುಲಗೇಶ್, ಹನುಮಂತ, ಪ್ರಸಾದ್, ಗುರುನಾಥ್, ಸುನೀಲ್, ಸಂತೋಷ್, ಪ್ರಶಾಂತ್, ಕುಮಾರಸ್ವಾಮಿ ಸೇರಿದಂತೆ ಉಪಸ್ಥಿತರರಿದ್ದರು.