ಬಳ್ಳಾರಿ: ನಗರದ ಕೋಮಾರಸ್ವಾಮಿ ದೇವಸ್ಥಾಬಳಿ. ಕೇಕ್ ಕಟ್ ಮಾಡುವ ಮೂಲಕ ಅಂತರಾಷ್ಟ್ರೀಯ ಪತ್ರಿಕಾ ವಿತರಕರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಚಳಿ, ಗಾಳೆ ಮಳೆಯನ್ನು ಲೆಕ್ಕಿಸದೆ. ದಿನನಿತ್ಯವು ರಾಜ್ಯ ರಾಷ್ಟ್ರ ಸ್ಥಳಿಯ ಸುದ್ದಿಯ ದಿನಪತ್ರಿಕೆಗಳನ್ನ ನಗರದ ಪ್ರತಿ ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುವ ಪತ್ರಿಕಾ ವಿತರಕರಿಗಾಗಿ ಆಚರಿಸುವ, ಅಂತರಾಷ್ಟ್ರೀಯ ಪತ್ರಿಕಾ ವಿತರಕ ದಿನಾಚರಣೆ ಇದಾಗಿದೆ.

ಇಂದು, ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ್ಯ ಕಮ್ರುದ್ದೀನ್ ನೇತೃತ್ವದಲ್ಲಿ, ಹಲವು ವರ್ಷಗಳಿಂದ ನಗರದ ಮನೆ ಮನೆಗೂ ವಿವಿಧ ದಿನಪತ್ರಿಕೆಗಳನ್ನ ತಲುಪಿಸುತ್ತಿರುವ ಪತ್ರಿಕಾ ವಿತರಕರು, ಕೇಕ್ ಕಟ್ ಮಾಡಿ, ಸಿಹಿ ತಿನಿಸಿ ಸಂಭ್ರಮಿಸಿದರು.
ಇನ್ನು ಇದೇ ಸಂದರ್ಭದಲ್ಲಿ ಹಲವು ವರ್ಷಗಳಿಂದ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ, ಪತ್ರಿಕಾ ವಿತರಕರಾದ, ಮಲ್ಲಿಕಾರ್ಜುನ್, ಶೇಖ್, ನಾಗೇಶ್, ಕೃಷ್ಣ, ಗೋಪಾಲ್, ವಿದ್ಯಾನಗರ ನಾಗರಾಜ್, ಮಂಜು, ಕಪ್ಪಗಲ್ ರಸ್ತೆಯ ನಾಗರಾಜ್ ಸೇರಿದಂತೆ ಈನಾಡು ಪತ್ರಿಕೆಯ ಸೆಗ್ಮೆಂಟ್ ಮುಖ್ಯಸ್ಥರಾದ ಪ್ರದೀಪ್ ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.
