Friday, April 18, 2025
Google search engine

Homeರಾಜ್ಯಸುದ್ದಿಜಾಲಬಳ್ಳಾರಿ: ಕಂದಾಯ ಇಲಾಖೆಯ ಇನಾಂ ರದ್ದತಿ ಅಭಿಯಾನ ರಾಜ್ಯಕ್ಕೆ ಪ್ರಥಮ

ಬಳ್ಳಾರಿ: ಕಂದಾಯ ಇಲಾಖೆಯ ಇನಾಂ ರದ್ದತಿ ಅಭಿಯಾನ ರಾಜ್ಯಕ್ಕೆ ಪ್ರಥಮ

ಬಳ್ಳಾರಿ: ರಾಜ್ಯ ಸರ್ಕಾರದ ಇನಾಂ ರದ್ದತಿ ಅಭಿಯಾನದಿಂದ ಬಳ್ಳಾರಿ ಜಿಲ್ಲಾಡಳಿತ 11,643 ಅರ್ಜಿಗಳಲ್ಲಿ 3264 ಅರ್ಜಿಗಳ ಇನಾಂ ರಧ್ದತಿಗೊಳಿಸಿ ಪಟ್ಟನೀಡುವ ಮೂಲಕ ರಾಜ್ಯದಲ್ಲೆ ಪ್ರಥಮ ಸ್ಥಾನದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಬಳ್ಳಾರಿ ಜಿಲ್ಲೆಯ ಸಹಾಯಕ ಆಯುಕ್ತರಾದ ಹೇಮಂತ ಕುಮಾರ್ ತಿಳಿಸಿದರು.
ಇಂದು ನಗರದ ನೂತನ ಜಿಲ್ಲಾಡಳಿತ ಭವನದ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು 1978 ರಲ್ಲಿ ಇನಾಂ ರದ್ದತಿ ಕಾಯ್ದೆ ಜಾರಿ ಮಾಡಲಾಗಿತ್ತು. 1988 ರಲ್ಲಿಯು ಇನಾಂ ರದ್ದತಿ ಮಾಡಲಾಗಿದ್ದರೂ ಹಲವಾರು ಅರ್ಜಿಗಳು ಬಂದಿಧ್ದು ರದ್ದು ಮಾಡಿದ್ದರು.

ಬ್ರಿಟಿಷ್ ಮತ್ತು ರಾಜರ ಆಡಳಿತ ಅವಧಿಯಲ್ಲಿಇನಾಂ ರೀತಿಯಲ್ಲಿ ಪಡೆದ ಜಮೀನುಗಳು ಮಾರಾಟ ಮಾಡಿದರು ಹಕ್ಕು ಬದಲಾವಣೆ ಯಾಗದ ಕಾರಣ ಅನೇಕ ಜನರು ರೋಸಿ ಹೋಗಿದ್ದರು. ಇನಾಂ ರದ್ದತಿಗಾಗಿ ಕಛೇರಿಗಳಿಗೆ ಅಲೆದು ಅಲೆದು ಸುಸ್ತಾಗಿದ್ದರು. ಹೀಗಾಗಿ, ಇನಾಂ ರದ್ದತಿ ಅಭಿಯಾನದಡಿ ಜಿಲ್ಲೆಯಲ್ಲಿ ನೀಡಲಾಗಿದ್ದ 11,643 ಅರ್ಜಿಗಳನ್ನ ಇತ್ಯರ್ಥ ಮಾಡಲು ತಿಂಗಳಲ್ಲಿ ನಾಲ್ಕು ದಿನ ಅರ್ಜಿ ವಿಲಾವಾರಿ ಕೈಗೊಂಡು 3264 ಅರ್ಜಿಗಳನ್ನ ಇತ್ಯರ್ಥಗೊಳಿಸಿ ಸಂಬಂದಿಸಿದವರಿಗೆ ಪಟ್ಟ ನೀಡಲಾಗಿದ್ದು 1974 ರ ಹಿಂದಿನಿಂದಲು ಭೂಮಿ ಉಳುಮೆ ಮಾಡುತ್ತಿರುವವರಿಗೆ ಮಾತ್ರ ಇನಾಂ ರದ್ದತಿ ಮಾಡಲಾಗಿದ್ದು,ಇನಾಂ ರದ್ದತಿಗಾಗಿ ಯಾವುದೆ ಮಧ್ಯವರ್ತಿಗಳ ಹಾವಳಿಗೆ ಬಲಿಯಾಗದಂತೆ ಪಟ್ಟ ನೀಡುವ ಮೂಲಕ ರಾಜ್ಯದಲ್ಲೆ ಅತಿ ಹೆಚ್ಚು ಅರ್ಜಿಗಳನ್ನ ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.

ಇನ್ನು ದೇವದಾಯಿ ಇನಾಂ ಜಮೀನುಗಳ ರದ್ದತಿಗೆ 280 ಅರ್ಜಿಗಳು ಸಲ್ಲಿಕೆಯಾಗಿದ್ದು, ಭೂ ನ್ಯಾಯ ಮಂಡಳಿಗೆ ವರ್ಗಾಯಿಸಲಾಗಿದೆ ಮಂಡಳಿ ತಿರ್ಮಾನ ಕೈಗೊಳ್ಳುತ್ತದೆ. ಪಟ್ಟ ನೀಡಲಾದ ಜಮೀನುಗಳು 15 ವರ್ಷದ ವರೆಗೂ ಮಾರಾಟಕ್ಕೆ ಅವಕಾಶವಿಲ್ಲ ಎನ್ನುವ ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular