ಬಳ್ಳಾರಿ: ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಸಿಐಎಫ್ ಅನುದಾನದಡಿ ರೂ.1.20 ಲಕ್ಷ ಸಹಾಯಧನದಲ್ಲಿ ಸ್ತೀ-ಶಕ್ತಿ ಸಂಘವತಿಯಿಂದ ಸ್ಥಾಪಿಸಲಾದ ಸ್ತ್ರೀ-ಶಕ್ತಿ ಕ್ಯಾಂಟೀನ್ ಅನ್ನು ಸಂಸದ ವೈ.ದೇವೆಂದ್ರಪ್ಪ ಅವರು ಸೋಮವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಜಿಪಂ ಉಪ ಕಾರ್ಯದರ್ಶಿ ಗಿರಿಜಾ ಶಂಕರ್, ಜಿಪಂ ಯೋಜನಾ ನಿರ್ದೇಶಕ ಪ್ರಮೋದ್ ಸೇರಿದಂತೆ ಜಿಲ್ಲಾ ಪಂಚಾಯತ್‍ನ ಇತರೆ ಅಧಿಕಾರಿಗಳು ಮತ್ತು ಯೋಜನೆಯ ಎಲ್ಲಾ ಸಿಬ್ಬಂದಿಗಳು ಮತ್ತು ಮಹಿಳೆಯರು ಇದ್ದರು.