Monday, April 21, 2025
Google search engine

Homeರಾಜ್ಯಬಳ್ಳಾರಿ: ನೀರಿನ ಹೊಂಡದಲ್ಲಿ ಬಿದ್ದು ಮೂವರು ಸಾವು

ಬಳ್ಳಾರಿ: ನೀರಿನ ಹೊಂಡದಲ್ಲಿ ಬಿದ್ದು ಮೂವರು ಸಾವು

ಬಳ್ಳಾರಿ: ಸಂಡೂರು ತಾಲೂಕಿನ ತೋರಣಗಲ್ಲು‌ ಬಳಿ ಇರುವ ಜಿಂದಾಲ್ ಉಕ್ಕಿನ ಕಾರ್ಖಾನೆಯಲ್ಲಿನ ನೀರಿನ ಹೊಂಡದಲ್ಲಿ ಬಿದ್ದು ಮೂವರು ಮೃತಪಟ್ಟಿದ್ದಾರೆ.

ಭುವನಹಳ್ಳಿ ಮೂಲದ ಜೆಡೆಪ್ಪ, ಬೆಂಗಳೂರು ಮೂಲದ ಸುಶಾಂತ, ಚೆನೈ ಮೂಲದ ಮಹಾದೇವನ್ ಮೃತ ದುರ್ದೈವಿಗಳು.

ನೀರಿನ ಹೊಂಡಕ್ಕೆ ಜೋಡಿಸಲಾಗಿದ್ದ ಪೈಪ್ ​ನಲ್ಲಿ ಸಮಸ್ಯೆ ಕಂಡು ಬಂದಿತ್ತು. ಪೈಪ್​ ರಿಪೇರಿ ಮಾಡಲು ಮೂವರು ಹೋಗಿದ್ದಾರೆ. ಪೈಪ್ ​ನಲ್ಲಿ ಬರುತ್ತಿದ್ದ ನೀರನ್ನು ನಿಲ್ಲಿಸದೆ ಹಾಗೆ ದುರಸ್ತಿ ಕಾರ್ಯ ಮಾಡುವಾಗ, ನೀರಿನ ರಭಸಕ್ಕೆ ಚನ್ನೈ ಮೂಲದ ಮಹಾದೇವನ್​​ ನೀರಿನ ಹೊಂಡದಲ್ಲಿ ಬಿದ್ದಿದ್ದಾನೆ. ಈತನನ್ನು ರಕ್ಷಿಸಲು ಹೋಗಿ ಇನ್ನಿಬ್ಬರೂ ಕೂಡ ಮೃತಪಟ್ಟಿದ್ದಾರೆ.

ತೋರಣಗಲ್ಲು‌ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular