ಬಳ್ಳಾರಿ: ಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ತನ್ನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣದಲ್ಲಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದ್ದು, 2022-23 ಶೈಕ್ಷಣಿಕ ವರ್ಷದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ, ಸಂಪತ್ ಕುಮಾರ್ ಪ್ರಥಮ ರ‍್ಯಾಂಕ್ ಪಡೆದರೆ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕರಣಂ ಭಾರ್ಗವ್ 5ನೇ ರ‍್ಯಾಂಕ್ ಪಡೆಯುವ ಮೂಲಕ ಬಿಐಟಿಎಂ ಕಾಲೇಜಿಗೆ ಕೀರ್ತಿ ತಂದಿದ್ದು, ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಯಶವಂತ್ ಭೂಪಾಲ್, ಉಪನಿರ್ದೇಶಕರಾದ ವೈ.ಜೆ. ಪೃಥ್ವಿರಾಜ್, ಪ್ರಾಚಾರ್ಯರಾದ ಡಾ. ಯಡವಳ್ಳಿ ಬಸವರಾಜ್, ವಿಭಾಗ ಮುಖ್ಯಸ್ಥರು, ಡೀನ್‌ಗಳು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿಯವರು ಈ ಉನ್ನತ-ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ವಿದ್ಯಾರ್ಥಿಗಳ ಯಶಸ್ಸು ಇತರರಿಗೆ ಉನ್ನತ ಗುರಿಯನ್ನು ಹೊಂದಲು ಮತ್ತು ಅವರ ಕನಸುಗಳನ್ನು ಚೈತನ್ಯದಿಂದ ಮುಂದುವರಿಸಲು ಪ್ರೇರೇಪಿಸುತ್ತದೆ ಮತ್ತು ಈ ವಿದ್ಯಾರ್ಥಿಗಳ ಸಮರ್ಪಣೆ, ನಮ್ಮ ಗೌರವಾನ್ವಿತ ಅಧ್ಯಾಪಕರ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಈ ಮಹೋನ್ನತ ಸಾಧನೆಗಳಿಗೆ ಕಾರಣವಾಗಿದೆ. ಮತ್ತು ವಿದ್ಯಾರ್ಥಿಗಳ ಶ್ರಮ ಹಾಗೂ ಅವರ ಪಟ್ಟುಬಿಡದ ಅನ್ವೇಷಣೆಯು ಕಲಿಕೆ ಮತ್ತು ಬೆಳವಣಿಗೆಯ ವಾತಾವರಣವನ್ನ, ಉತ್ತೇಜಿಸಲು ಬಿಐಟಿಎಂ ಬದ್ಧತೆಯನ್ನ ಪ್ರತಿಬಿಂಬಿಸುತ್ತದೆ ಎಂದು ಕಾಲೇಜಿನ ಅಧ್ಯಕ್ಷರಾದ ಡಾ. ಯಶವಂತ್ ಭೂಪಾಲ್ ರವರು ತಿಳಿಸಿದರು.