Monday, April 14, 2025
Google search engine

Homeರಾಜ್ಯಬೆಳ್ತಂಗಡಿ-ಮೂಡಬಿದ್ರಿ ರಾಜ್ಯ ಹೆದ್ದಾರಿ ಮುಳುಗಡೆ: ಮನೆಗಳಿಗೆ ಹಾನಿ

ಬೆಳ್ತಂಗಡಿ-ಮೂಡಬಿದ್ರಿ ರಾಜ್ಯ ಹೆದ್ದಾರಿ ಮುಳುಗಡೆ: ಮನೆಗಳಿಗೆ ಹಾನಿ

ವೇಣೂರು: ದ.ಕ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳ್ತಂಗಡಿ ಮೂಡಬಿದ್ರಿ ರಾಜ್ಯ ಹೆದ್ದಾರಿ ಮುಳುಗಡೆಯಾಗಿದ್ದು, ೧೫ಕ್ಕೂ ಹೆಚ್ಚು ಮನೆಗಳ ಜನರನ್ನು ಸ್ಥಳಾಂತರಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಮಾಲಾಡಿ ಸೋಣಂದೂರು ಗ್ರಾಮದ ಮೊದಲೆ ಎಂಬಲ್ಲಿ ಕಿರು ಸೇತುವೆ ಕುಸಿತಗೊಂಡಿದ್ದು, ವೇಣೂರು, ಹೊಸಂಗಡಿ, ಅಂಗರಕರಿಯ ಹನ್ನೆರಡು ಕವಲು ಇಲ್ಲಿ ಸೇತುವೆ ಡ್ಯಾಮ್ ಗಳಲ್ಲಿ ನೀರು ಹರಿದು ಬಂದು ಅನೇಕ ತೋಟ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ.

ಅಲ್ಲದೆ ಭಾರೀ ಮಳೆಯಿಂದ ವೇಣೂರು ಚರ್ಚ್ ಬಳಿ ಬಸ್ ನೆರೆ ನೀರಲ್ಲಿ ಸಿಲುಕಿದ್ದು, ರಾತ್ರಿ೧.೩೦ಕ್ಕೆ ವೇಣೂರು ಪೊಲೀಸರ ಕಾರ್ಯಾಚರಣೆ ಮೂಲಕ ದಡ ಸೇರಿಸಲಾಯಿತು. ಯಾವುದೇ ಸಾವು ನೋವು ವರದಿಯಾಗಿಲ್ಲ. ಪೊಲೀಸರು, ಲೈನ್ ಮೆನ್ ಗಳು ರಾತ್ರಿ ಯಿಂದ ಮುಂಜಾನೆವರೆಗೂ ಯುವಕರೊಂದಿಗೆ ಸೇರಿಕೊಂಡು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ.

RELATED ARTICLES
- Advertisment -
Google search engine

Most Popular