ತುಮಕೂರು: ವಿ.ಸೋಮಣ್ಣ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಳ ಹಿನ್ನೆಲೆ ತುಮಕೂರು ಜಿಲ್ಲಾ ಬಿಜೆಪಿಯಲ್ಲಿ ಲೋಕಸಭಾ ಟಿಕೆಟ್ ಲಾಬಿ ಶುರುವಾಗಿದ್ದು, ಜಾತಿ ಲೆಕ್ಕಾಚಾರದಲ್ಲಿ ಟಿಕೆಟ್ ಗಾಗಿ ಡಿಮ್ಯಾಂಡ್ ಮಾಡಲಾಗಿದೆ.
ಈ ಬಾರಿ ಕುಂಚಿಟಿಗ ಒಕ್ಕಲಿಗರಿಗೆ ಟಿಕೆಟ್ ಕೊಡುವಂತೆ ಆಗ್ರಹಿಸಲಾಗಿದ್ದು, ಶಿರಾ ಮಾಜಿ ಶಾಸಕ ಡಾ.ರಾಜೇಶ್ ಗೌಡರಿಗೆ ಟಿಕೆಟ್ ಕೊಡುವಂತೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ.

ಲಿಂಗಾಯತ ಮತಗಳು ಬಿಜೆಪಿಗೆ ಸಹಜವಾಗಿ ಬರತ್ತದೆ. ಅದಕ್ಕೆ ಒಕ್ಕಲಿಗರ ಮತಗಳು ಆ್ಯಡ್ ಅಪ್ ಆಗಬೇಕು. ಹಾಗಾಗಿ ಕುಂಚಿಟಿಗ ಒಕ್ಕಲಿಗರಾದ ರಾಜೇಶ್ ಗೌಡರಿಗೆ ಟಿಕೆಟ್ ಕೊಡುವಂತೆ ಆಗ್ರಹಿಸಿದ್ದಾರೆ.
ರಾಜೇಶ್ ಗೌಡರ ತಂದೆ ಮೂಡಲಗಿರಿಯಪ್ಪ ಕೂಡ ಸಂಸದರಾಗಿದ್ದವರು. ಮೂಡಲಗಿರಿಯಪ್ಪರ ನಂತರ ಕುಂಚಿಟಿಗರಿಗೆ ಅವಕಾಶ ಸಿಕ್ಕಿಲ್ಲ. ಈ ಬಾರಿಯಾದರೂ ಅವಕಾಶ ಕೊಡುವಂತೆ ಒತ್ತಾಯಿಸಿದ್ದಾರೆ.