Thursday, April 3, 2025
Google search engine

Homeರಾಜ್ಯಬೆಂಗಳೂರು: ಏಪ್ರಿಲ್​ ನಿಂದ ಡಿಸೆಂಬರ್’ವರೆಗೆ ವಿದ್ಯುತ್ ದರ ಹೆಚ್ಚಳ

ಬೆಂಗಳೂರು: ಏಪ್ರಿಲ್​ ನಿಂದ ಡಿಸೆಂಬರ್’ವರೆಗೆ ವಿದ್ಯುತ್ ದರ ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲರಿಗೂ 200 ಯುನಿಟ್​ ಉಚಿತ ಘೋಷಣೆ ಕೇಳಿ ಜನರಲ್ಲಿ ಸಂಭ್ರಮ ಇತ್ತು. ಆದರೆ ಇದೀಗ ಮತ್ತೆ ಕರೆಂಟ್​ ಬಿಲ್​ ಹೆಚ್ಚಳ ಮಾಡುವ ಮೂಲಕ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಕರೆಂಟ್​ ಶಾಕ್ ಕೊಟ್ಟಿದೆ.

ಪ್ರತೀ ಯುನಿಟ್ ​ಗೆ 70 ಪೈಸೆ ಹೆಚ್ಚಳ ಮಾಡಿದ್ದು, ಜುಲೈ 1ರಿಂದಲೇ ಜಾರಿಯಾಗಲಿರುವ ಕುರಿತು ಕೆಇಆರ್ ಸಿ ​​​ ಆದೇಶ ಹೊರಡಿಸಿದೆ.

ಏಪ್ರಿಲ್ ತಿಂಗಳಲ್ಲೇ ಪ್ರತಿ ಯುನಿಟ್ ​ಗೆ 70 ಪೈಸೆ ಹೆಚ್ಚಳ ಮಾಡಿ ಕೆಇಆರ್​​ ಸಿ ಆದೇಶ ಹೊರಡಿಸಿತ್ತು. ಆದ್ರೆ ಚುನಾವಣೆ ಇದ್ದಿದ್ರಿಂದ ಕರೆಂಟ್​ ಬಿಲ್​ ಹೆಚ್ಚಳ ಆದೇಶಕ್ಕೆ ತಡೆ ಹಿಡಿಯಲಾಗಿತ್ತು.

ವಿದ್ಯುತ್ ಸರಬರಾಜು ಮಾಡುವ 5 ನಿಗಮಗಳಲ್ಲೂ ಹೆಚ್ಚಳ ಮಾಡಲಾಗಿದೆ. ಕೆಇಆರ್ ​ಸಿಯಲ್ಲಿ ವಾರ್ಷಿಕ ಪರಿಷ್ಕರಣೆಯಲ್ಲಿ 70 ಪೈಸೆ ಹೆಚ್ಚಳವಾಗಿದೆ. 2023ರವರೆಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಜುಲೈ 2023 ರಿಂದ ಸೆ.31 ರವರೆಗೆ ಹೆಚ್ಚಳ

ಬೆಸ್ಕಾಂ: 51 ಪೈಸೆ

ಮೆಸ್ಕಾಂ: 47 ಪೈಸೆ

ಚೆಸ್ಕಾಂ: 41 ಪೈಸೆ

ಹೆಸ್ಕಾಂ: 50 ಪೈಸೆ

ಜೆಸ್ಕಾಂ: 34 ಪೈಸೆ

ಅಕ್ಟೋಬರ್ 2023 ರಿಂದ ಡಿಸೆಂಬರ್ 30 ರವರೆಗಿನ ಹೆಚ್ಚಳ

ಬೆಸ್ಕಾಂ: 50 ಪೈಸೆ

ಮೆಸ್ಕಾಂ: 46 ಪೈಸೆ

ಚೆಸ್ಕಾಂ: 41 ಪೈಸೆ

ಹೆಸ್ಕಾಂ: 50 ಪೈಸೆ

ಜೆಸ್ಕಾಂ: 33 ಪೈಸೆ

ಹೀಗೆ 2023ರವರೆಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

RELATED ARTICLES
- Advertisment -
Google search engine

Most Popular