ಬೆಂಗಳೂರು: ಹೊಸ ಮೆಗಾ ಕೋಚಿಂಗ್ ಟರ್ಮಿನಲ್ ಯೋಜನೆಗೆ ಹಸಿರು ನಿಶಾನೆ ಬೆಂಗಳೂರು ನಗರದಲ್ಲಿ ರೈಲು ಸಂಚಾರದ ಹೆಚ್ಚುತ್ತಿರುವ ಒತ್ತಡವನ್ನು ಕಡಿಮೆ ಮಾಡಲು, ದೇವನಹಳ್ಳಿ ಬಳಿ ಪ್ರಸ್ತಾವಿತ ಮೆಗಾ ಕೋಚಿಂಗ್ ಟರ್ಮಿನಲ್ ಯೋಜನೆಗೆ ಅಂತಿಮ ಸ್ಥಳ ಸಮೀಕ್ಷೆಗೆ (FLS) ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ.ಈ ಸಮೀಕ್ಷೆ ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ ಕಾರಿಡಾರ್ನಲ್ಲಿ ನಡೆಯಲಿದೆ ಮತ್ತು 1.35 ಕೋಟಿ ರೂ. ವೆಚ್ಚವಾಗಲಿದೆ.
ಬೆಂಗಳೂರಿನಲ್ಲಿ ಈಗ ಕೇವಲ ಮೂರು ಟರ್ಮಿನಲ್ ಹಾಗೂ 12 ಪಿಟ್ ಲೈನ್‍ಗಳೊಂದಿಗೆ, ಪ್ರತಿದಿನ 140 ಸ್ಟಾರ್ಟಿಂಗ್, 139 ಎಂಡಿಂಗ್ ಹಾಗೂ 142 ಪಾಸ್-ಥ್ರೂ ರೈಲುಗಳ ಸಂಚಾರವಿದೆ. ಈಗಿನ ಮೂಲಸೌಕರ್ಯ 110 ರೈಲುಗಳಿಗೆ ಪ್ರಾಥಮಿಕ ನಿರ್ವಹಣಾ ಸೇವೆ ಒದಗಿಸುತ್ತಿದೆ. 2024–25ರಲ್ಲಿ 103.72 ಮಿಲಿಯನ್ ಪ್ರಯಾಣಿಕರ ಉಗಮದೊಂದಿಗೆ 212.06 ಮಿಲಿಯನ್ ಪ್ರಯಾಣಿಕರ ಸಂಚಾರ ನಡೆದಿದೆ. ಮುಂದಿನ ದಿನಗಳಲ್ಲಿ ದಿನಕ್ಕೆ 210 ರೈಲುಗಳವರೆಗೆ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.