Sunday, April 20, 2025
Google search engine

Homeಅಪರಾಧಕಾನೂನುಬೆಂಗಳೂರು: ಉದ್ಯಮಿಗಳ ಮನೆ, ಕಚೇರಿ ಮೇಲೆ ಐಟಿ ದಾಳಿ

ಬೆಂಗಳೂರು: ಉದ್ಯಮಿಗಳ ಮನೆ, ಕಚೇರಿ ಮೇಲೆ ಐಟಿ ದಾಳಿ

ಬೆಂಗಳೂರು: ಇಂದು ಬೆಳ್ಳಂಬೆಳಿಗ್ಗೆ ನಗರದ ಉದ್ಯಮಿಗಳ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಮಾಗಡಿ ರಸ್ತೆ, ಆಡುಗೋಡಿ ಸೇರಿದಂತೆ ವಿವಿಧೆಡೆ ಅಧಿಕಾರಿಗಳು ಕಡತಗಳ ಶೋಧ ನಡೆಸುತ್ತಿದ್ದಾರೆ. ಮಾಗಡಿ ರಸ್ತೆಯ ಬಳಿ ಇರುವ ಈಟಿಎ ಗಾರ್ಡನ್ ಅಪಾರ್ಟ್ಮೆಂಟ್, ಆಡುಗೋಡಿ ಬಳಿ ಆ್ಯಕ್ರೋಪೊಲಿಸ್ ಅಪಾರ್ಟ್ಮೆಂಟ್‌ ನಲ್ಲಿರುವ ಉದ್ಯಮಿಗಳ ಮನೆಯಲ್ಲಿ ಪರಿಶೀಲನೆ ಮುಂದುವರೆದಿದೆ.

ಕೆಲ ದಿನಗಳ ಹಿಂದೆ ಜ್ಯುವೆಲ್ಲರಿ‌ ಅಂಗಡಿ ಮಾಲೀಕರು, ಗುತ್ತಿಗೆದಾರರ ಮನೆ-ಕಚೇರಿಗಳ‌ ಮೇಲೆ‌ ಐಟಿ ದಾಳಿ ನಡೆದಿತ್ತು. ರಾಜಾಜಿನಗರದ ಇಂಡಸ್ಟ್ರಿಯಲ್‌ ಎಸ್ಟೇಟ್ ಬಳಿಯಿರುವ ಪಿ.ಎಸ್.ಆಗ್ರೋ ಫುಡ್ ಎಲ್​ಎಲ್​ಪಿ ಕಾರ್ಖಾನೆ, ಬಿ.ವಿ.ಕೆ.ಅಯ್ಯಂಗಾರ್ ರಸ್ತೆಯಲ್ಲಿರುವ ಮಾಣಿಕ್ ಮೇವಾ ಸ್ಟೋರ್ ಮೇಲೆ ದಾಳಿ ನಡೆದಿತ್ತು. ಈ ಎರಡು ಆಹಾರ ಕಂಪನಿಗಳು ಒಣ ಹಣ್ಣುಗಳ ವ್ಯಾಪಾರ ನಡೆಸುತ್ತಿವೆ‌‌. ಆದಾಯಕ್ಕೆ ಪ್ರತಿಯಾಗಿ ತೆರಿಗೆ ಪಾವತಿಸದ ಆರೋಪದ ಹಿನ್ನೆಲೆಯಲ್ಲಿ ಅಕ್ಟೋಬರ್​ 16ರ ಬೆಳಗಿನ ಜಾವ ಸುಮಾರು 10ಕ್ಕೂ ಹೆಚ್ಚು ಕಾರುಗಳಲ್ಲಿ ಆಗಮಿಸಿದ ಅಧಿಕಾರಿಗಳು ಶೋಧ ನಡೆಸಿದ್ದರು.

RELATED ARTICLES
- Advertisment -
Google search engine

Most Popular