Thursday, April 3, 2025
Google search engine

Homeರಾಜ್ಯಬೆಂಗಳೂರು: ನಂದಿನಿ ಇಡ್ಲಿ, ದೋಸೆ ಹಿಟ್ಟು ಬಿಡುಗಡೆ ಮಾಡಿದ ಸಿಎಂ

ಬೆಂಗಳೂರು: ನಂದಿನಿ ಇಡ್ಲಿ, ದೋಸೆ ಹಿಟ್ಟು ಬಿಡುಗಡೆ ಮಾಡಿದ ಸಿಎಂ

ಬೆಂಗಳೂರು: ಇನ್ಮುಂದೆ ಗ್ರಾಹಕರಿಗೆ ‘ನಂದಿನಿ’ ಹಾಲಷ್ಟೇ ಅಲ್ಲ, ‘ನಂದಿನಿ ಇಡ್ಲಿ ಮತ್ತು ದೋಸೆ’ ಹಿಟ್ಟು ಕೂಡ ಸಿಗಲಿದೆ. ನಂದಿನಿ ಇಡ್ಲಿ, ದೋಸೆ ಹಿಟ್ಟನ್ನು ಸಿಎಂ ಸಿದ್ದರಾಮಯ್ಯ ಬುಧವಾರ ಬಿಡುಗಡೆ ಮಾಡಿದರು.

ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ನಂದಿನಿ’ ವತಿಯಿಂದ ಪ್ರಥಮ ಬಾರಿಗೆ ಗ್ರಾಹಕರಿಗೆ ಒದಗಿಸಲು ತಯಾರಿಸಿರುವ ನಂದಿನಿ ವೇ ಪ್ರೊಟೀನ್‌ಯುಕ್ತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬಿಡುಗಡೆ ಮಾಡಲಾಯಿತು.

ಸಚಿವರಾದ ವೆಂಕಟೇಶ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್, ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಕೆಎಂಎಫ್‌ ಬಿಡುಗಡೆ ಮಾಡಿರುವ ಇಡ್ಲಿ ಮತ್ತು ದೋಸೆ ಹಿಟ್ಟಿನಲ್ಲಿ 5% ರಷ್ಟು ಪ್ರೊಟೀನ್‌ ಅಂಶವನ್ನು ಮಿಶ್ರಣ ಮಾಡಲಾಗಿದೆ. 450 ಗ್ರಾಂ ತೂಕದ ಪ್ಯಾಕೆಟ್‌ಗೆ 40 ರೂ. ಹಾಗೂ 900 ಗ್ರಾಂ ತೂಕದ ಪ್ಯಾಕೆಟ್‌ಗೆ 80 ರೂ. ದರ ನಿಗದಿಪಡಿಸಲಾಗಿದೆ.

ಬೆಂಗಳೂರು ನಗರದಲ್ಲಿ ದೋಸೆ ಮತ್ತು ಇಡ್ಲಿ ಹಿಟ್ಟನ್ನು ಪ್ಯಾಕೆಟ್‌ಗಳಲ್ಲಿ ಪ್ರಯೋಗಿಕವಾಗಿ ಮಾರಾಟ ಮಾಡಲಾಗುತ್ತಿದೆ.

RELATED ARTICLES
- Advertisment -
Google search engine

Most Popular