Wednesday, June 24, 2026
Google search engine

Homeರಾಜ್ಯಕುಟುಂಬ ಸ್ನೇಹಿ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ

ಕುಟುಂಬ ಸ್ನೇಹಿ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ

ಬೆಂಗಳೂರು: ವಿಶ್ವದ ಅತ್ಯಂತ ಕುಟುಂಬ ಸ್ನೇಹಿ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮೂರನೇ ಸ್ಥಾನ ಪಡೆದು ಕರ್ನಾಟಕಕ್ಕೆ ಹೆಮ್ಮೆಯ ಗೌರವ ತಂದುಕೊಟ್ಟಿದೆ. ಈ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಕುಟುಂಬದೊಂದಿಗೆ ಪ್ರಯಾಣಿಸುವವರಿಗೆ ಅನುಕೂಲಕರ ಸೌಲಭ್ಯಗಳನ್ನು ಒದಗಿಸಿರುವ ಬೆಂಗಳೂರು ವಿಮಾನ ನಿಲ್ದಾಣವು ಶಿಶುಪಾಲನಾ ಕೊಠಡಿಗಳು, ಮಕ್ಕಳಿಗಾಗಿ ವಿಶೇಷ ಆಟದ ವಲಯಗಳು, ವಿಶಾಲ ಟರ್ಮಿನಲ್‌ಗಳು ಹಾಗೂ ವಿಶ್ವದರ್ಜೆಯ ಮೂಲಸೌಕರ್ಯಗಳ ಮೂಲಕ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಮಕ್ಕಳಿಗೆ ವಿನ್ಯಾಸಗೊಳಿಸಿದ ಆಟದ ಪ್ರದೇಶಗಳು, ಕುಟುಂಬಗಳ ವಿಶ್ರಾಂತಿಗೆ ಅನುಕೂಲಕರ ಸ್ಥಳಗಳು, ಹಸಿರುಮಯ ವಾತಾವರಣ ಮತ್ತು ಸುಧಾರಿತ ಸೇವೆಗಳು ಪ್ರಯಾಣಿಕರಿಂದ ಉತ್ತಮ ರೇಟಿಂಗ್ ಗಳಿಸಿವೆ.

ವಿಮಾನ ಪ್ರಯಾಣಿಕರಿಗೆ ಅತ್ಯುತ್ತಮ ಸೌಲಭ್ಯಗಳೊಂದಿಗೆ ಆರಾಮದಾಯಕ ಹಾಗೂ ಉಲ್ಲಾಸಭರಿತ ಪ್ರಯಾಣದ ಅನುಭವ ಒದಗಿಸುವುದು ರಾಜ್ಯ ಸರ್ಕಾರದ ಆದ್ಯತೆಯಾಗಿದ್ದು, ಮುಂದೆಯೂ ಈ ದಿಸೆಯಲ್ಲಿ ಕ್ರಮ ಮುಂದುವರಿಯಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular