ಬೆಂಗಳೂರು: ಭಾರತೀಯ ಕಲಾ ಸಾಧಕರ ಒಗ್ಗೂಡಿಸುವಿಕೆ ಅಭಿಪ್ರಾಯದಿಂದ ಸಂಸ್ಕಾರ ಭಾರತೀ ನಾಲ್ಕು ದಿನಗಳ ಅಖಿಲ ಭಾರತೀಯ ಕಲಾ ಸಾಧಕ ಸಂಗಮ ಆಯೋಜನೆಗೊಂಡಿದೆ.
ಪತ್ರಿಕಾ ಗೋಷ್ಠಿ ಯಲ್ಲಿ ಈ ಕುರಿತು ವಿವರ ನೀಡಿದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಶ್ವಿನ್ ದಳ್ವಿ, ಕರ್ನಾಟಕ ರಾಜ್ಯ ಅಧ್ಯಕ್ಷ ಸುಚೇಂದ್ರ ಪ್ರಸಾದ್ ಖಜಾಂಚಿ ಜಗದೀಶ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್, ಕಲಾವಿದೆ ಮಂಜಮ್ಮ, ಇತಿಹಾಸ ತಜ್ಞ ವಿಕ್ರಮ ಸಿಂಹ, ತಬಲಾ ವಾದಕ ರವೀಂದ್ರ ಯಾವಗಲ್, ಉಪಸ್ಥಿತರಿರು ತ್ತಾರೆ ಎಂದರು.
ಲೋಕ ನೃತ್ಯ, ವಿಚಾರ ಸಂಕಿರಣ, ಕಲಾ ಪ್ರದರ್ಶಿನಿ, ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲಿ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ರವಿಶಂಕರ್ ಗುರೂಜಿ ಮತ್ತು ಸರಸಂಘ ಚಾಲಕಡಾ. ಮೋಹನ್ ಭಾಗವತ್ ಮಾತನಾಡುವರು.
ಪ್ರಥಮ ಬಾರಿಗೆ ದಕ್ಷಿಣ ಭಾರತದ ಬೆಂಗಳೂರಿನಲ್ಲಿ ನಡೆಯಲಿದೆ.