ತುಮಕೂರು : ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರ ಪುತ್ರ ಹಾಗೂ ಕಾಂಗ್ರೆಸ್ ಎಂಎಲ್ಸಿ ರಾಜೇಂದ್ರ ಅವರ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ತುಮಕೂರು ಡಿವೈಎಸ್ಪಿ ಮಂಜುನಾಥ್ ಅವರ ನೇತೃತ್ವದಲ್ಲಿ ರಚನೆಯಾಗಿದ್ದ ತನಿಖಾ ತಂಡವನ್ನು ಇದೀಗ ಏಕಾಏಕಿ ಬದಲಾಯಿಸಲಾಗಿದೆ.
ಡಿವೈಎಸ್ಪಿ ಮಂಜುನಾಥ್ ತನಿಖಾ ತಂಡದಿಂದ ಕಿಕ್ ಔಟ್ ಮಾಡಲಾಗಿದೆ. ಮಾಗಡಿ ಡಿವೈಎಸ್ಪಿ ಪ್ರವೀಣ್ ಗೆ ತನಿಖಾ ತಂಡದ ಹೊಣೆ ವಹಿಸಲಾಗಿದೆ. ಶಿರಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ, ಕ್ಯಾತ್ಸಂದ್ರ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಬದಲು ಎಸ್ಪಿ ಕಚೇರಿಯ ಇನ್ಸ್ಪೆಕ್ಟರ್ ಅವಿನಾಶ್ ಹಾಗೂ ಕ್ಯಾತ್ಸಂದ್ರ ಸಿಪಿಐ ರಾಮಪ್ರಸಾದ್ ತನಿಖಾ ತಂಡ ಸೇರ್ಪಡೆಯಾಗಿದ್ದಾರೆ.
ಮಾರ್ಚ್ 22 ರಂದು ಎಂಎಲ್‌ಸಿ ರಾಜೇಂದ್ರ ಎಸ್ ಪಿಗೆ ದೂರು ನೀಡಿದ್ದರು. ಪ್ರಕರಣ ಸಂಬಂಧ ಕ್ಯಾತ್ಸಂದ್ರ ಠಾಣೆಯಲ್ಲಿ ಎಫ್ಐಆರ್ ಎಫ್ ಐ ಆರ್ ದಾಖಲಾದ ಬೆನ್ನಲ್ಲೇ ತನಿಖಾ ತಂಡವನ್ನು ರಚಿಸಲಾಗಿತ್ತು. ಮಧುಗಿರಿ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ತನಿಕಾ ತಂಡ ರಚನೆ ಮಾಡಲಾಗಿತ್ತು.
ಕಳೆದ ನಾಲ್ಕು ದಿನಗಳಿಂದ ತನಿಖ ತಂಡ ಪ್ರಕರಣದ ಕುರಿತು ತನಿಖೆ ನಡೆಸಿತ್ತು. ಈಗ ಏಕಾಏಕಿ ತನಿಖೆ ನಡೆಸುತ್ತಿದ್ದ ತಂಡ ಬದಲಾಗಿದೆ. ಪ್ರಕರಣ ಸಂಬಂಧ ಆಡಿಯೋ ದಲ್ಲಿ ಪುಷ್ಪ ಮಾತನಾಡಿದ್ದಾಳೆ. ಪ್ರಕರಣದ A4 ಆರೋಪಿ ಯಶೋಧ ಮತ್ತು A5 ಆರೋಪಿ ಯತೀಶ್ ನನ್ನು ತನಿಖಾ ತಂಡ ಬಂಧಿಸಿದೆ. ಇದೀಗ ತನಿಖಾ ತಂಡವನ್ನು ಏಕಾಏಕಿ ಬದಲಾವಣೆ ಮಾಡಿದ್ದು ಕುತೂಹಲ ಕೆರಳಿಸಿದೆ.