ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಚಾಣಕ್ಯ ವಿದ್ಯಾಸಂಸ್ಥೆ ಆವರಣದಲ್ಲಿ ಈ ಶಾಲೆಯ ಪ್ರಾಯೋಜಕತ್ವದಲ್ಲಿ ಬೆಟ್ಟದಪುರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಕೆ.ಎಂ ಸ್ವಾಮಿ ಮಾತನಾಡಿ , ಈ ಶಾಲೆಯ ಶಿಸ್ತು, ಸಮಯಪಾಲನೆ ಹಾಗೂ ಅಚ್ಚುಕಟ್ಟುತನ ಬಹಳ ಮೆಚ್ಚುಗೆಯಾಯಿತು, ಆದ್ದರಿಂದ ಇಲಾಖೆ ಪರವಾಗಿ ಶಾಲೆಯ ಆಡಳಿತ ಮಂಡಳಿಗೆ ಹಾಗೂ ಶಿಕ್ಷಕವರ್ಗದವರಿಗೆ ಕೃತಜ್ಞತೆ ತಿಳಿಸಿದರು.
ಕೇರಳದಲ್ಲಿ ಇಂತಹ ಕಾರ್ಯಕ್ರಮವನ್ನು ನೋಡಿದ ಅಂದಿನ ಶಿಕ್ಷಣ ಸಚಿವರು ಈ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಮ್ಮ ರಾಜ್ಯದಲ್ಲಿ ಆಗಬೇಕು ಎಂದು ಆ ವರ್ಷದಿಂದಲೇ ಪ್ರಾರಂಬಿಸಿ, ಮಕ್ಕಳ ಪ್ರತಿಭೆಯನ್ನು ಹೊರತರಲು ನಮ್ಮ ಇಲಾಖೆ ಪ್ರಾಮಾಣಿಕ ಪ್ರಯತ್ನ ಹಾಗೂ ಯಶಸ್ವಿಯಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಯದುರಾಜ್, ಕಾರ್ಯದರ್ಶಿ ಜಗಧೀಶ್, ನಿರ್ಧೇಶಕ ಹರೀಶ್, ಸಿ.ಆರ್‌ಪಿ ಚಂದ್ರಶೇಖರ್, ಗುರುರಾಘವೇಂದ್ರ, ಮುಖ್ಯಶಿಕ್ಷಕ ಎಚ್.ಕೆ ತಿಮ್ಮಯ್ಯ, ಹಾರನಹಳ್ಳಿ ಕೆಪಿಎಸ್ ಶಾಲೆಯ ಮು.ಶಿ ಕೆ.ಸಿ ಸತೀಶ್, ನಿವೃತ್ತ ಶಿಕ್ಷಕರಾದ ಶಿವರುದ್ರಯ್ಯ, ಜಬಿನ್ ತಾಜ್, ಕ್ಲಸ್ಟರ್‌ನ ಎಲ್ಲಾ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬೆಟ್ಟದಪುರ ಎಸ್‌ಎಂಎಸ್ ಶಾಲೆಯ ೨ನೇ ತರಗತಿ ವಿದ್ಯಾರ್ಥಿನಿ ರನ್ವಿತ ಆರ್. ಬೇಲೂರಿನ ಶಿಲಾಬಾಲಕಿ ವೇಷ ಎಲ್ಲರ ಗಮನ ಸೆಳೆಯಿತು.
