ಬೆಟ್ಟದಪುರ : ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಯುವ ರೈತ ಮಂಜು ಎಂಬುವರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮಂಜು ರವರು ಮನೆಯ ವ್ಯವಹಾರವನ್ನು ಅವರೇ ನೋಡಿಕೊಂಡು ಹೋಗುತ್ತಿದ್ದರು. ತಮಗೆ ಇರುವ 7 ಎಕರೆ ಜಮೀನಿನ ಮೇಲೆ ಕುಶಾಲನಗರದ ಕೆನರಾ ಬ್ಯಾಂಕಿನಲ್ಲಿ 7.5 ಲಕ್ಷ ರೂ ಚಪ್ಪರದಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 3.5 ಲಕ್ಷ ರೂ ಹಾಗೂ ಇತರರಿಂದ ಕೈಸಾಲವಾಗಿ 4ಲಕ್ಷ ರೂ ಸೇರಿ ಒಟ್ಟು 15 ಲಕ್ಷ ರೂ ಸಾಲವನ್ನು ಮಾಡಿದ್ದು ಬೆಳೆದ ಬೆಳೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ತನ್ನ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಮಂಜುವಿನ ತಂದೆ ಸಿ ಕೆ ಜಗದೀಶ್ ದೂರು ಕೊಟ್ಟಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಬೆಟ್ಟದಪುರದ ಪೊಲೀಸ್ ಠಾಣೆಯ ಪಿಎಸ್ಐ ಪ್ರಕಾಶ್ ಎಂ ಎತ್ತಿನಮನಿ ಶವವನ್ನು ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.