ಹೊಸೂರು: ಭತ್ತದ ಬೆಳೆ ಬೆಳೆಯುವಾಗ ತಜ್ಞರು ಶಿಫಾರಸ್ಸು ಮಾಡಿದ ಗೊಬ್ಬರಗಳನ್ನು ಬಳಕೆ ಮಾಡಿದಾಗ ಮಾತ್ರ ಉತ್ತಮ ಇಳುವರಿ ಪಡಿಯಲು ಸಾಧ್ಯ ಎಂದು ಸಿಕಿಂದರಾಬಾದ್ ಹರ್ ಲಾಲ್ ಸೀಡ್ಸ್ ನ ವಲಯ ವ್ಯವಸ್ಥಾಪಕ ಎಸ್.ಜಿ.ಪಾಟೀಲ್ ಹೇಳಿದರು
ಸಾಲಿಗ್ರಾಮ ತಾಲೂಕಿನ ಹೊಸೂರು ಸಮೀಪದ ಸಾಲೇಕೊಪ್ಪಲು ಗ್ರಾಮದ ಎಸ್.ಪಿ. ಅಕಾಶ್ ಅವರ ಜಮೀನಿನಲ್ಲಿ ಏರ್ಪಡಿಸಿದ್ದ ಸಿಕಿಂದರಾಬಾದ್ ನ ಹರ್ ಲಾಲ್ ಸೀಡ್ಸ್ ನ “ಆಸ್ಮಿತಾ” ಭತ್ತದ ಬೆಳೆಯ ಕ್ಷೇತ್ರತ್ಸೋವನ್ನು ಉದ್ಘಾಟಿಸಿ ಅವರು ಮಾತನಾಡಿದರು
ರೈತರು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಇಳುವರಿಯ ಪಡೆಯಲು ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ಬಳಕೆ ಮಾಡುತ್ತಿದ್ದು ಇದರಿಂದ ಭೂಮಿಯ ಫಲವತ್ತತೆಯ ನಾಶವಾಗಿ ಬೆಳೆಗೆ ರೋಗಗಳು ಬರುತ್ತಿದ್ದು, ಇದನ್ನು ಕಡಿಮೆ ತಜ್ಞರು ನಿಗದಿ ಮಾಡಿದಷ್ಟೆ ಗೊಬ್ಬರ ಬಳಕೆ ಮಾಡಿ ಜೊತೆ ಭತ್ತದ ನಂತರ ಗೊಬ್ಬರವಾಗುವ ಬೆಳೆಗಳನ್ನು ಬೆಳೆದಾಗ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು ಎಂದರು.

ಈ ಆಸ್ಮಿತಾ ಭತ್ತದ ತಳಿಯು 130 ದಿನದಲ್ಲಿ ಕಟಾವಿಗೆ ಬರಲಿದ್ದು, ರೋಗರುಜಿನಗಳು ಕಡಿಮೆ ಇದ್ದು ಪ್ರತಿ ಎಕರೆಗೆ 25 ರಿಂದ 30 ಕ್ವಿಂಟಾಲ್ ಭತ್ತದ ಇಳುವರಿ ಬರಲಿದ್ದು ರೈತರು ಬೆಳೆಯವ ಗುಣಮಟ್ಟದ ಆಧಾರದಲ್ಲಿ ಇನ್ನು ಹೆಚ್ಚು ಇಳುವರಿ ಪಡೆಯಬಹುದು ರೈತರಿಗೆ ಈ ತಳಿಯು ವರದಾನವಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಆಸ್ಮಿತಾ ಭತ್ತ ತಳಿ ಬೆಳೆದ ಯುವ ರೈತ ಎಸ್.ಪಿ.ಆಕಾಶ್ ಬೆಳೆ ಮತ್ತು ಇಳುವರಿಯ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ರೈತ ಗವಿರಂಗೇಗೌಡ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹರ್ ಲಾಲ್ ಸೀಡ್ಸ್ ನ ಮೈಸೂರು ವಿಭಾಗದ ವ್ಯವಸ್ಥಾಪಕ ವಿರೇಶ ಕುಮಾರ್, ತಾಲೂಕು ವ್ಯವಸ್ಥಾಪಕ ಶ್ವೇತರಾಜು, ಬಿತ್ತನೆ ಬೀಜ ವಿತರಕರಾದ ಚೌಡಶೆಟ್ಟಿ,ಅನಿಲ್ ಕುಮಾರ್,ಹರೀಶ್ ಕುಮಾರ್, ಎಚ್.ಎಲ್.ಸುದರ್ಶನ್, ಹಳಿಯೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್.ಆರ್.ದಿನೇಶ್, ಉಪಾಧ್ಯಕ್ಷ ನೂತನ್, ಮಾಜಿ ಉಪಾಧ್ಯಕ್ಷ ಕುಮಾರಸ್ವಾಮಿ, ರೈತರಾದ ಶ್ರೀನಿವಾಸ, ವಾಸುದೇವ,ಡೈರಿ ವೆಂಕಟೇಶ್,ಕುಳ್ಳೇಗೌಡ, ಅಂಗಡಿ ಕುಮಾರ್,ರಾಜೇಗೌಡ,ಹೊನ್ನೇಗೌಡ,ಸಾಗರ್,ಮಂಜು,ಮನು, ಟೈಲರ್ ಪಾಂಡು, ಚೆಲುವ, ವಿಕಾಶ್, ಸೋಮೇಗೌಡ, ಎಸ್.ಟಿ.ಮಂಜುನಾಥ್, ಹೊಸೂರು ರವಿ, ಡೀಲ್ ಮಹದೇವ, ಸತೀಶ,ಯುವ ಮುಖಂಡರಾದ ಎಸ್.ಆರ್.ಮುರುಳಿಗೌಡ, ಎಸ್.ಕೆ.ಚೇತನ್ ,ಸಂತೋಷ್ ಸೇರಿದಂತೆ ಮತ್ತಿತರರು ಹಾಜರಿದ್ದರು.