ಮೈಸೂರು: ಬಿ.ಇಡಿ ಪದವಿಯ ಅಂತಿಮ ಪರೀಕ್ಷೆಯಲ್ಲಿ ಬಿಜಿಎಸ್ ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳಾದ ಕುಮಾರಿ ಮೌನ ಕೆ ಬಿ 2021 ಮತ್ತು ಕುಮಾರಿ ಕಾವ್ಯಶ್ರೀ ಟಿ ಎಂ 2022 ರಲ್ಲಿ ಪ್ರಥಮ ರಾಂಕ್ ನೊಂದಿಗೆ ಚಿನ್ನದ ಪದಕ ಗಳಿಸಿದರೆ, ಸುಮಾ ಎಂ ಜೆ ಇಂದು ನಡೆದ ಮೈಸೂರು ವಿಶ್ವವಿದ್ಯಾನಿಲಯದ 103ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಗಳಿಸುವುದರೊಂದಿಗೆ ಕಾಲೇಜಿನ ಹ್ಯಾಟ್ರಿಕ್ ಸಾಧನೆಗೆ ಕಾರಣಕರ್ತರಾಗಿದ್ದಾರೆ.
ಕಾಲೇಜಿನ ಹ್ಯಾಟ್ರಿಕ್ ಸಾಧನೆಗೆ ಕಾರಣಕರ್ತರಾದ ಪ್ರಶಿಕ್ಷಣಾರ್ಥಿಗಳನ್ನು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಮೈಸೂರು ಶಾಖೆಯ ಕಾರ್ಯದರ್ಶಿಗಳಾದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಪ್ರಾಂಶುಪಾಲ ಡಾ. ನಾಗರಾಜು, ಉಪನ್ಯಾಸಕ ವರ್ಗದವರು ಅಭಿನಂದಿಸಿದ್ದಾರೆ.