ಹನಗೋಡು: ಕೇಂದ್ರ ಸರ್ಕಾರವು ದೇಶದ ೨.೭ ಲಕ್ಷ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ವಿಕ್ಷೀತ್ ಭಾರತ ಸಂಕಲ್ಪ ಯಾತ್ರಾ ಕೈಗೋಳ್ಳಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಇಲಾಖೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ತಿಳಿದರು.
ಹನಗೋಡು ಹೋಬಳಿಯ ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕೆನರಾ ಬ್ಯಾಂಕ್ (ಪ್ರಾದೇಶಿಕ ಗ್ರಾಮೀಣಾ ವಿಭಾಗ) ವತಿಯಿಂದ ಆಯೋಜಿಸಿದ್ದ ವಿಕ್ಷೀತ್ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ವಿಕ್ಷೀತ್ ಭಾರತ ಸಂಕಲ್ಪ ಯಾತ್ರ ಮೂಲಕ ಪ್ರಧಾನ ಮಂತ್ರಿ ಅವಾಸ್ ಯೋಜನೆ (ಗ್ರಾಮೀಣ), ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಯೋಜನೆ, ಫಸಲ್ ಬೀಮಾ ಯೋಜನೆ, ಪೋಷಣ್ ಅಭಿಯಾನ, ಉಜ್ವಲ್ ಯೋಜನೆ, ಆಯುಷ್ಮಾನ್ ಭಾರತ್, ಜನೌಷಧಿ ಯೋಜನೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಜನರಿಗೆ ಜಾಗರತಿ ಮೂಡಿಸುವುದರೊಂದಿಗೆ ಸವಲತ್ತು ಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.
ಆದಿವಾಸಿ ನಾಯಕ ಬಿರ್ಸಾಮುಂಡ ಜಯಂತಿ ಅಂಗವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಹೆಚ್ಚಾಗಿ ವಾಸಿಸುತ್ತಿರುವ ಗ್ರಾಮೀಣಾ ಪ್ರದೇಶಗಳಲ್ಲಿ ಈ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳವುದೇ ಮುಖ್ಯ ಉದ್ದೇಶ ಎಂದರು. ಸಂಸದ ಪ್ರತಾಪ್ ಸಿಂಹ ಮಾತನಾಡಿ ಸರ್ಕಾರದ ಜನ ಕಲ್ಯಾಣ ಯೋಜನೆಯ ಸೌಲಭ್ಯಗಳು ಗರಿಷ್ಠ ಸಂಖ್ಯೆಯಲ್ಲಿ ಅರ್ಹ ಫಲುನುಭವಿಗಳಿಗೆ ತ್ವರಿತವಾಗಿ ತಲುಪುವಂತೆ ನೋಡಿಕೋಳ್ಳುವಂತೆ ವಿಕ್ಷಿತ್ ಭಾರತ ಸಂಕಲ್ಪ ಯಾತ್ರೆಯ ಉದ್ದೇಶವಾಗಿದ್ದು ಇದಕ್ಕೆ ಎಲ್ಲಾರು ಕೈ ಜೋಡಿಸಬೇಕೆಂದು ಮನವಿ ಮಾಡಿ ಈ ಭಾಗದ ಅನಧಿಕೃತ ತಂಬಾಕು ಬೆಳೆಗಾರರಿಗೆ ತಂಬಾಕು ಮಾರಾಟ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗು ವುದೆಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭಾವಿಗಳಿಗೆ ಸವಲತ್ತು ವಿತರಿಸಲಾಯಿತು. ಕಿಸಾನ್ ಸನ್ಮಾನ್ ಯೋಜನೆಯ ವತಿಯಿಂದ ನೀಡಲಾದ ಪ್ರಧಾನಿ ಮಂತ್ರಿ ಪ್ರಣಮ್ ಯೋಜನೆಯಡಿಯಲ್ಲಿ ಡ್ರೋನ್ ಹಾರಿಸಿ ರೈತರಿಗೆ ತಿಳಿವಳಿಕೆ ನೀಡುವ ಮೂಲಕ ಔಷಧಿ ಯಾವ ರೀತಿಯಲ್ಲಿ ಸಿಂಪರಣೆ ಮಾಡುವ ಸಾಧನವನ್ನು ಬಿಡುಗಡೆ ಮಾಡಿದರು.