Tuesday, April 15, 2025
Google search engine

Homeರಾಜ್ಯಸುದ್ದಿಜಾಲಜನಧ್ವನಿ ಫೌಂಡೇಶನ್ ಅಧ್ಯಕ್ಷ ವಕೀಲ ಆಯರಹಳ್ಳಿ ಪ್ರವೀಣ್ ಗೆ ಒಲಿದ ಭಾರತ ಸೇವಾರತ್ನ ಪ್ರಶಸ್ತಿ

ಜನಧ್ವನಿ ಫೌಂಡೇಶನ್ ಅಧ್ಯಕ್ಷ ವಕೀಲ ಆಯರಹಳ್ಳಿ ಪ್ರವೀಣ್ ಗೆ ಒಲಿದ ಭಾರತ ಸೇವಾರತ್ನ ಪ್ರಶಸ್ತಿ

  • ವರದಿ: ವಿನಯ್ ದೊಡ್ಡಕೊಪ್ಪಲು

ಹೈದರಾಬಾದ್ ನ ಪ್ರತಿಷ್ಟಿತ ಅಕ್ಷಯ ಪ್ರಾರ್ಥನಾ ಫೌಂಡೇಶನ್ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಕೊಡ ಮಾಡುವ ರಾಷ್ಟ್ರ ಮಟ್ಟದ ಭಾರತ ಸೇವರತ್ನ ಪ್ರಶಸ್ತಿಗೆ ಜನಧ್ವನಿ ಫೌಂಡೇಶನ್ ಅಧ್ಯಕ್ಷ ವಕೀಲ ಆಯರಹಳ್ಳಿ ಪ್ರವೀಣ್ ಭಾಜನರಾಗಿದ್ದು ಡಿ.29 ಭಾನುವಾರ ಬೆಂಗಳೂರಿನ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ಭಾರತ ಸೇವಾ ರತ್ನ ಪ್ರಶಸ್ತಿ ಸ್ವಿಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರವೀಣ್ ಪಿ ಸ್ನೇಹ ಬಳಗದ ಸದಸ್ಯರು ಪ್ರವಾಹ ಕೋರೋನಾದಂತ ಉದ್ವಿಗ್ನ ಸಂದರ್ಭದಿಂದ ಹಿಡಿದು ಇಲ್ಲಿಯವರೆಗೂ ಜನಪರ ಕಾರ್ಯಕ್ರಮಗಳ ಮೂಲಕ ಜನಸೇವೆ ಮಾಡುತ್ತಿರುವ ಆಯರಹಳ್ಳಿ ಪ್ರವೀಣ್ ಅವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಗೌರವ,ಪ್ರಶಸ್ತಿಗಳು ಸಿಗಲಿ ಹಾಗೂ ಇನ್ನು ಹೆಚ್ಚಿನ ಕೆಲಸ ಜನಪರ ಕೆಲಸಗಳನ್ನು ಮಾಡಲು ಮಾಡಲು ಭಗವಂತ ಶಕ್ತಿ ನೀಡಲಿ ಎಂದು ಅಭಿನಂದಿಸಿದರು.

ಇದೆ ವೇಳೆ ಮಾತನಾಡಿದ ಭಾರತ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಆಯರಹಳ್ಳಿ ಪ್ರವೀಣ್ ಅವರು ಪ್ರಶಸ್ತಿಯ ಜೊತೆಗೆ ಬಳುವಳಿಯಾಗಿ ಬಂದ ಹಣವನ್ನು ಬೀದಿ ಬದಿಯಲ್ಲಿ ಮಲಗುವ ನಿರಾಶ್ರಿತರಿಗೆ ಹೊದಿಕೆ ವಿತರಣೆ ಮಾಡವ ಕಾರ್ಯಕ್ಕೆ ಬಳಸುವುದಾಗಿ ಘೋಷಣೆ ಮಾಡಿದರು.

RELATED ARTICLES
- Advertisment -
Google search engine

Most Popular