ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಭೀಮ್ ಆರ್ಮಿ ಸಂಘಟನೆ ತಾಲ್ಲೂಕು ನೂತನ ಅಧ್ಯಕ್ಷರಾಗಿ ರಮೇಶ್ ಕಿರನಲ್ಲಿ ರವರನ್ನು ಆಯ್ಕೆ ಮಾಡಲಾಗಿದೆ ಎಂದು ಭೀಮ್ ಆರ್ಮಿ ದಕ್ಷಿಣ ಕರ್ನಾಟಕ ಅಧ್ಯಕ್ಷ ಗಿರೀಶ್ ಬೋರಯ್ಯ ಕೊಣಸೂರು ತಿಳಿಸಿದರು.
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು ಭೀಮ್ ಆರ್ಮಿ ಸಂಘಟನೆ ಪ್ರಾರಂಭದಿಂದಲೂ ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಕೊಡಿಸಲು ಶ್ರಮಿಸುತ್ತಿದೆ, ನೊಂದವರ ಹಾಗು ಶೋಷಿತರ ಧ್ವನಿಯಾಗಿ ಸಾಮಾಜಿಕ ಜವಾಬ್ದಾರಿಯನ್ನು ಸಂಘಟನೆ ಹೊಂದಿದೆ, ನೂತನ ಪದಾಧಿಕಾರಿಗಳು ಸಂಘಟನೆಯ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ನೂತನ ಅಧ್ಯಕ್ಷರಾದ ರಮೇಶ್ ಕಿರನಲ್ಲಿ ಅವರು ಮಾತನಾಡಿ ಸಂಘಟನೆ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿ ಸಂವಿಧಾನದ ಆಶಯದಂತೆ ಪ್ರಾಮಾಣಿಕ ಪಾರದರ್ಶಕ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿ ಅಧ್ಯಕ್ಷರಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಹೇಳಿದರು.
ಈ ಸಂದರ್ಭ ಕೊಡಗು ಜಿಲ್ಲಾಧ್ಯಕ್ಷ ಕಾಮರಾಜ್, ಮೈಸೂರು ಜಿಲ್ಲಾ ಉಪಾಧ್ಯಕ್ಷ ಈಚೂರು ಪ್ರಕಾಶ್, ಮುಖಂಡರಾದ ಶಿವಕುಮಾರ್, ಚಿನ್ನಸ್ವಾಮಿ, ರವೀಶ್ ಇದ್ದರು.