Friday, April 11, 2025
Google search engine

Homeಸಿನಿಮಾಆಗಸ್ಟ್‌ 3ಕ್ಕೆ ‘ಭೀಮ’ ಟ್ರೇಲರ್‌ ರಿಲೀಸ್

ಆಗಸ್ಟ್‌ 3ಕ್ಕೆ ‘ಭೀಮ’ ಟ್ರೇಲರ್‌ ರಿಲೀಸ್

ಸದ್ಯ ಕನ್ನಡ ಚಿತ್ರರಂಗ ನಿರೀಕ್ಷೆ ಇಟ್ಟು ಎದುರು ನೋಡುತ್ತಿರುವ ಸಿನಿಮಾ “ಭೀಮ’. ಔಟ್‌ ಅಂಡ್‌ ಔಟ್‌ ಮಾಸ್‌ ಸಿನಿಮಾವಾಗಿ ತಯಾರಾಗಿರುವ ಈ ಚಿತ್ರ ಆಗಸ್ಟ್‌ 9ರಂದು ಬಿಡುಗಡೆಯಾಗುತ್ತಿದೆ. ಸ್ಟಾರ್‌ ಸಿನಿಮಾಗಳ ರಿಲೀಸ್‌ ಜಾತ್ರೆಗೆ ಹಸಿರು ನಿಶಾನೆ ತೋರಿಸುತ್ತಿರುವ ಸಿನಿಮಾಗಿಯೂ “ಭೀಮ’ ಹೊರಹೊಮ್ಮಿದೆ.

ಮಾಸ್‌ ಸಿನಿಮಾ ಬಂದರೆ ಹೊಸ ಜೋಶ್‌, ಥಿಯೇಟರ್‌ ನಲ್ಲೊಂದು ಸಂಭ್ರಮ ಇರುತ್ತದೆ ಎಂಬ ಮಾತಿದೆ. ಈಗ ‘ಭೀಮ’ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾನೆ.

ಈಗಾಗಲೇ ಹಾಡು, ಟೀಸರ್‌ ಮೂಲಕ ಹಿಟ್‌ಲಿಸ್ಟ್‌ ಸೇರಿರುವ ಈ ಚಿತ್ರದ ಟ್ರೇಲರ್‌ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಆಗಸ್ಟ್‌ 3ರಂದು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಇದು ಮಾಸ್‌ ಪ್ರೇಮಿಗಳ ಕ್ರೇಜ್‌ ಹೆಚ್ಚಿಸಲಿದೆ.

ಈ ಚಿತ್ರದ ಮೂಲಕ ಒಂದು ಸೂಕ್ಷ್ಮ ವಿಚಾರವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸಂದೇಶವಿರುವ ಈ ಚಿತ್ರ ಎಲ್ಲರಲ್ಲೂ ಜಾಗೃತಿ ಮೂಡಿಸುವಂತೆ ಆಗಬೇಕು. ನಾನು ಹಾಗೂ ಸಂಭಾಷಣೆಕಾರ ಮಾಸ್ತಿ ಸೇರಿ ಕಥೆ ಹಂತದಿಂದ ಹಿಡಿದು ಚಿತ್ರಕಥೆ, ಸಂಭಾಷಣೆಯಿಂದ ಪ್ರತಿ ಹಂತದಲ್ಲೂ ಬಹಳ ಶ್ರಮ ಪಟ್ಟು ಕೆಲಸ ಮಾಡಿದ್ದೇವೆ. ವಿದ್ಯಾರ್ಥಿಗಳು, ಹದಿಹರೆಯದವರ ಬದುಕಿನ ದುಃಸ್ಥಿತಿಯ ವಿಚಾರ ಸೇರಿದಂತೆ ಒಂದಷ್ಟು ನಾ ಕಂಡು ಕೇಳಿದಂತ ಸತ್ಯಗಳನ್ನು ಹೊರಹಾಕುವ ಪ್ರಯತ್ನ ಭೀಮ ಚಿತ್ರದಲ್ಲಿ ಮಾಡಿದ್ದೇನೆ ಎನ್ನುವುದು ನಿರ್ದೇಶಕ ಕಂ ನಟ ವಿಜಯ್‌ ಮಾತು. ಈ ಚಿತ್ರವನ್ನು ಕೃಷ್ಣ ಸಾರ್ಥಕ್‌ ಹಾಗೂ ಜಗದೀಶ್‌ ಗೌಡ ನಿರ್ಮಿಸಿದ್ದಾರೆ.

RELATED ARTICLES
- Advertisment -
Google search engine

Most Popular