ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಭೇರ್ಯ ಗ್ರಾಮದ ಗ್ರಾಮದೇವತೆ ಶ್ರೀಕರಿಯಮ್ಮದೊಡ್ಡಮ್ಮ ದೇವಿಯ ಸಿಡಿ ಉತ್ಸವ ಇದೇ ಏಪ್ರಿಲ್ 15 ಮಂಗಳವಾರ ರಾತ್ರಿ ಹಾಗು ಏಪ್ರಿಲ್ 16 ಬುಧವಾರದಂದು ಜಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀ ಕರಿಯಮ್ಮ ದೊಡ್ಡಮ್ಮ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷ ನಾಡಗೌಡ ಕುಮಾರಸ್ವಾಮಿ ತಿಳಿಸಿದರು. ಅವರು ಭೇರ್ಯ ಗ್ರಾಮದ ಶ್ರೀ ಕರಿಯಮ್ಮ ದೊಡ್ಡಮ್ಮ ದೇವಾಲಯ ಆವರಣದಲ್ಲಿ ಗ್ರಾಮದ ಸರ್ವ ಸಮಾಜದ ಯಜಮಾನರು ಮುಖಂಡರೊಟ್ಟಿಗೆ ಪೂರ್ವಬಾವಿ ಸಭೆ ನಡೆಸಿ ಚರ್ಚಿಸಿ ಸಿಡಿ ಮತ್ತು ಜಾತ್ರಾ ಮಹೋತ್ಸವ ಪ್ರಕಟಿಸಿದರು.
ಜಾತ್ರಾ ಮಹೋತ್ಸವಕ್ಕೆ ಈಗಿನಿಂದಲೇ ಸ್ವಚ್ಚತಾ ಕಾರ್ಯಕ್ಕೆ ಸ್ಥಳೀಯ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಮನವಿ ಮಾಡುವುದು ಜೊತೆಗೆ ಚೆಸ್ಕಾಂ ನವರಿಗೆ ನಿರಂತರ ವಿದ್ಯುತ್ ನೀಡಲು ಮನವಿ ಪತ್ರ ಕೊಡುವುದು ಈ ಬಾರಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಬಸ್ ಡಿಪೋ ವ್ಯವಸ್ಥಾಪಕರಿಗೆ ಹೆಚ್ಚಿನ ಬಸ್ ಸಂಚಾರಕ್ಕೆ ಬಸ್ ಗಳನ್ನು ಕಲ್ಪಸುವಂತೆ ಮನವಿ ಮಾಡಿದರು.
ಶ್ರೀ ಕರಿಯಮ್ಮ ದೊಡ್ಡಮ್ಮಸಿಡಿ ಮತ್ತು ಜಾತ್ರಾ ಮಹೋತ್ಸವ ಎರಡು ದಿನ ನಡೆಯಲಿದ್ದು ಎಲ್ಲರೂ ಸಹ ಸಂಪೂರ್ಣವಾಗಿ ಸಹಕಾರ ನೀಡಿ ಎಂದರಲ್ಲದೆ, ಯಾವುದೇ ಸಮಸ್ಯೆಗಳ ಬಾರದಂತೆ ಜಾತ್ರಾ ಮಹೋತ್ಸವ ನಡೆಯಬೇಕು, ರಾಜ್ಯ ಹೊರ ಜಿಲ್ಲೆಗಳಿಂದ ಭಕ್ತಾದಿಗಳು ಆಗಮಿಸಲಿದ್ದು ಯಾವುದೇ ಕುಂದು ಕೊರತೆ ಬಾರದಂತೆ ಜಾತ್ರಾ ಮಹೋತ್ಸವ ನಡೆಸೋಣ ಎಂದರಲ್ಲದೆ,ದೇವಿಯ ದರ್ಶನಕ್ಕೆ ಸರತಿ ಸಾಲಿನ ವ್ಯವಸ್ಥೆ ಮಾಡಲು ಸಂಬಂದಪಟ್ಟರಿಗೆ ಸೂಚಿಸಲಾಯಿತು.
ಸಿಡಿ ಕಟ್ಟಿವವರು ಜಾಗ್ರತೆ ವಹಿಸಿ, ಕೊಂಬು ಕಹಳೆ ವಿವಿದ ವಾದ್ಯಗಳೊಂದಿಗೆ ಸಿಡಿಯನ್ನು ಮಾಡಲಾಗುವುದು. ಎಂದು ಮಾಹಿತಿ ನೀಡಿದ ನಾಡಗೌಡರು ಎರಡು ದಿನ ಮುಂಚೆಯೇ ದೇವಾಲಯಕ್ಕೆ ಹೂಗಳಿಂದ ಅಲಂಕಾರ, ಗ್ರಾಮದ ಹಾಸನ-ಮೈಸೂರು ರಸ್ತೆ, ಕೆ.ಆರ್.ಪೇಟೆ ರಸ್ತೆ, ಸಾಲಿಗ್ರಾಮ ರಸ್ತೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು ಎಂದರು.
ಬಳಿಕ ಟ್ರಸ್ಟ್ ನ ಸದಸ್ಯರೊಡಗೂಡಿ ಸಿಡಿ.ಮತ್ತು ಜಾತ್ರಾ ಮಹೋತ್ಸವ ಪೋಸ್ಟರ್ ಬಿಡುಗಡೆ ಮಾಡಿದರು.
ಟ್ರಸ್ಟ್ ನ ಉಪಾಧ್ಯಕ್ಷ ಕಂಡಕ್ಟರ್ ಪ್ರಕಾಶ್, ಕಾರ್ಯದರ್ಶಿ ಪುಟ್ಟಮಾದಯ್ಯ, ಗೌರವಾಧ್ಯಕ್ಷ ತಿಮ್ಮಪ್ಪ, ಖಜಾಂಚಿ ಕಾಯಿ ಪ್ರಕಾಶ್,, ಮುಖಂಡರಾದ ಬೋರಪ್ಪನಾಯಕ, ಯ.ತಮ್ಮಯ್ಯ, ಪುರುಷೋತ್ತಮ, ಚಿಕ್ಕಯ್ಯ, ರಾಜಯ್ತ, ಮಹದೇವಶೆಟ್ಟಿ, ಹುಚ್ಷೇಗೌಡ, ರಂಗಯ್ಯ, ದೊಡ್ಡೇಗೌಡ, ಈರಾಜಿ, ಶಿವನಂಜು, ಶಿವಣ್ಣ, ರೇವಣ್ಣ, ಮೋಹನ , ನಾಗಶೆಟ್ಟಿ, ರಾಮಣ್ಣ, ಹೋರಿ ಪ್ರಭಾಕರ್, ಆರ್ಚಕ ನಾಗಣ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಚಿತ್ರಶೀರ್ಷಿಕೆ : ಭೇರ್ಯ ಗ್ರಾಮದ ಗ್ರಾಮದೇವತೆ ಶ್ರೀಕರಿಯಮ್ಮದೊಡ್ಡಮ್ಮ ದೇವಿಯ ಸಿಡಿ ಮತ್ತು ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಪೂರ್ವಬಾವಿ ಸಭೆ ನಡೆಸಿ ಟ್ರಸ್ಟ್ ನ ಅಧ್ಯಕ್ಷ ನಾಡಗೌಡ ಕುಮಾರಸ್ವಾಮಿ ಅವರು
ಸದಸ್ಯರೊಡಗೂಡಿ ಸಿಡಿ.ಮತ್ತು ಜಾತ್ರಾ ಮಹೋತ್ಸವ ಪೋಸ್ಟರ್ ಬಿಡುಗಡೆ ಮಾಡಿದರು.