ಚಾಮರಾಜನಗರ: ಶ್ರೀ ಪಾರ್ವತಿ ಸಮೇತ ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಸ್ಥಾನ ಚಂದಕವಾಡಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ಭೀಮನ ಅಮಾವಾಸ್ಯೆ ಇಂದು ಬೆಳಿಗ್ಗೆ ದೇವರಿಗೆ, ಅರ್ಚನೆ,ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನಡೆದು ಅನ್ನಸಂತರ್ಪಣೆ ನಡೆಯಿತು.
ಪ್ರತಿವರ್ಷದಂತೆ ಈ ವರ್ಷವೂ ಅನ್ನಸಂತರ್ಪಣೆಯಲ್ಲಿ, ಪಾಯಸ ಕಡ್ಲೆಹುಳಿ, ಅನ್ನ, ಸಾಂಬಾರು, ಬೊಂದಿ, ಮಜ್ಜಿಗೆ ಎಲ್ಲವನ್ನು ಶುಚಿತ್ವವನ್ನು ಕಾಪಾಡಲು ಭಕ್ತದಿಗಳಿಗೆ ಟೇಬಲ್ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.
ಭಕ್ತದಿಗಳು ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಹೋಗುತ್ತಿದ್ದರು. ಪ್ರತಿವರ್ಷದಂತೆ ಈ ವರ್ಷ ಸತತವಾಗಿ 13ನೇ ವರ್ಷದ ಭೀಮನಮಾವಾಸ್ಯೆಯನ್ನು ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಸ್ಥಾನದಲ್ಲಿ ನಡೆಸಿಕೊಂಡು ಬರುತ್ತಿದ್ದು, ಅದರಂತೆ ಗ್ರಾಮದ ಪ್ರತಿ ಕೋಮಿನವರು ಒಂದೊಂದು ಜವಾಬ್ದಾರಿಗಳನ್ನು ತೆಗೆದುಕೊಂಡು ಭಕ್ತದಿಗಳಿಗೆ ಯಾವುದೇ ತೊಂದರೆಯಗದ ರೀತಿಯಲ್ಲಿ ಅನ್ನಸಂತರ್ಪಣೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಕೊಟ್ಟರು.

ಗ್ರಾಮದಲ್ಲಿ ಎಲ್ಲಾ ಜನಾಂಗದ ಯಜಮಾನರು, ಮುಖಂಡರು ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಕಪನಿನಾಯಕ, ಕಾರ್ಯದರ್ಶಿ ಕೇಶವಮೂರ್ತಿ, ಖಜಾಂಚಿ ಎಳನೀರು ರಾಜಣ್ಣ, ರಾಜುನಾಯಕ, ಶಿವಾನಂಕರಪ್ಪ, ರಮೇಶ, ರವಿ, ಮುರುಳಿ ದಾಸೆಗೌಡ್ರು, ಎಳನೀರು ಮಾದಯ್ಯ ಸಿದ್ದಪ್ಪಾಜಿ, ಮಹಾದೇವಸ್ವಾಮಿ ವಿಷಕಂಠ ನಾಯಕ, ಸಮಿತಿಯ ಎಲ್ಲಾ ನಿರ್ದೇಶಕರು ಹಾಗೂ ಗ್ರಾಮದ ಯಜಮಾನರುಗಳಾದ ಬಸವರಾಜುನಾಯಕ, ರಾಜೇಂದ್ರ, ಮಹಾದೇವಸ್ವಾಮಿ, ಕೆಂಪರಾಜು, ವೆಂಕಟೇಶ್, ಕುಮಾರ, ಭೋಜರಾಜು, ದ್ವಾರಕೀಶ್,, ಜಯಶಂಕರ, ಪುಟ್ಟಸ್ವಾಮಿ, ನಾಗರಾಜು ಎಲೆಕ್ಟ್ರಿಕಲ್ ರಾಮು ಗ್ರಾಮದ ಮುಖಂಡರುಗಳು ಹಾಜರಿದ್ದರು.