ಹನೂರು: ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮವಾಸ್ಯೆ ಹಿನ್ನೆಲೆಯಲ್ಲಿ ಶ್ರೀ ಮಲೆ ಮಹದೇಶ್ವರ ಗರ್ಭಗುಡಿ ಒಳಾಂಗಣ ಮತ್ತು ಹೊರಾಂಗಣವನ್ನು ಹಣ್ಣು ತರಕಾರಿ, ಹೂಗಳಿಂದ ಆಕರ್ಷಣೆಯಾಗಿ ಅಲಂಕಾರ ಮಾಡಲಾಗಿದೆ.
ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರದಿಂದ ಭೀಮನ ಅಮವಾಸೆಯ ಅಂಗವಾಗಿ ಮಹದೇಶ್ವರ ದರ್ಶನ ಮತ್ತು ಸೇವೆ ಮಾಡಲು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸುವ ಹಿನ್ನಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಈ ವರ್ಷ ದೇವಾಲಯ ಗರ್ಭಗುಡಿ ಮತ್ತು ಹೊರಾಂಗಣವನ್ನು ವಿವಿಧ ಬಗೆಯ ಹಣ್ಣು, ತರಕಾರಿ ಮತ್ತು ಹೂಗಳಿಂದ ಅಲಂಕಾರ ಮಾಡಲಾಗಿದ್ದು, ದೇವರ ದರ್ಶನಕ್ಕೆ ಬರುವ ಭಕ್ತರ ಕಣ್ಮನ ಸೆಳೆಯುವಂತಾಗಿದೆ.

ಭಾನುವಾರ ರಾತ್ರಿಯಿಂದಲೇ ದೇವಾಲಯ ಅಲಂಕಾರ ಮಾಡಿರುವ ಪ್ರಾಧಿಕಾರದ ಸಿಬ್ಬಂದಿಗಳು, ಹಗಲು ಇರಳು ಎನ್ನದೆ ಅತ್ಯಂತ ವಿಜೃಂಭಣೆಯಿಂದ ಅಲಂಕಾರ ಮಾಡಿದ್ದಾರೆ. ವಿದ್ಯುತ್ ದೀಪಾಲಂಕಾರ ಕೂಡ ಮಾಡಿದ್ದು, ದೇವಾಲಯಕ್ಕೆ ಬರುವ ಸಾವಿರಾರು ಭಕ್ತರು ದೇವಾಲಯದ ಸೌಂದರ್ಯ ಕಂಡು ಪುಳಕಿತರಾಗುತ್ತಿದ್ದಾರೆ.
