ಗುಂಡ್ಲುಪೇಟೆ: ತಾಲೂಕಿನ ಭೀಮನಬೀಡು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಕಾವ್ಯ ಎಸ್.ಮಣಿಕಂಠ ಹಾಗೂ ಉಪಾಧ್ಯಕ್ಷರಾಗಿ ಮಂಜುಳಾ ಮಹೇಶ್ ಅವಿರೋಧವಾಗಿ ಆಯ್ಕೆಯಾದರು.
ತಾಲೂಕಿನ ಭೀಮನಬೀಡು ಗ್ರಾಪ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾವ್ಯ ಎಸ್.ಮಣಿಕಂಠ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ಮಹೇಶ್ ಹೊರತು ಪಡಿಸಿ ಇತರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ ಅಧ್ಯಕ್ಷರಾಗಿ ಕಾವ್ಯ ಎಸ್.ಮಣಿಕಂಠ ಹಾಗೂ ಉಪಾಧ್ಯಕ್ಷರಾಗಿ ಮಂಜುಳಾ ಮಹೇಶ್ ಅವರನ್ನು ಚುನಾವಣೆ ಅಧಿಕಾರಿ ಕೆ.ಟಿ.ಮಹದೇವಶೆಟ್ಟಿ ಘೋಷಣೆ ಮಾಡಿದರು. ಆಯ್ಕೆ ಘೋಷಣೆ ಬೆನ್ನಲ್ಲೆ ಅಧ್ಯಕ್ಷರು ಹಾಗು ಉಪಾಧ್ಯಕ್ಷರಿಗೆ ಬೆಂಬಲಿಗರು ಹೂವಿನ ಹಾರ ಹಾಕಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ಬಿ.ಜಿ.ಶಿವಕುಮಾರ್, ನಿಕಟ ಪೂರ್ವ ಉಪಾಧ್ಯಕ್ಷರಾದ ಸೌಮ್ಯ ಮಹೇಶ್, ಸದಸ್ಯರಾದ ಜಿ. ಸ್ವಾಮಿ, ಸಿದ್ಧಶೆಟ್ಟಿ, ರವಿ, ಮಹದೇವೇಗೌಡ, ಚಂದ್ರಶೇಖರ್, ಶೋಭಾ ರಾಜು, ಸೀರಮ್ಮ, ಪಿಡಿಓ ಭೋಜೇಶ್, ಮುಖಂಡರಾದ ಭೀಮನಬೀಡು ಮಂಜು ಸೇರಿದಂತೆ ಇತರರು ಹಾಜರಿದ್ದರು.