ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪಟ್ಟಣದ ಮಧುವನಹಳ್ಳಿ ಬಡಾವಣೆಯಲ್ಲಿರುವ ಟಿ.ಮರಿಯಪ್ಪ ವಿದ್ಯಾ ಸಂಸ್ಥೆ ಕ್ಷೇತ್ರದಲ್ಲೇ ಹೆಸರು ಪಡೆದು ಉತ್ತಮ ಶಿಕ್ಷಣ ಸಂಸ್ಥೆಯಾಗಿ ಸಾವಿರಾರು ವಿದ್ಯಾರ್ಥಿಗಳನ್ನು ಶಿಕ್ಷಿತರನ್ನಾಗಿ ಮಾಡುವ ಮೂಲಕ ತನದೇ ಆದ ಅಸ್ತಿತ್ವ ಹೊಂದಿದೆ ಈ ಸಂಸ್ಥೆಯನ್ನು ಜೀರ್ಣೋದ್ದಾರ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಟಿ.ಮರಿಯಪ್ಪ ಸ್ಮಾರಕ ವಿದ್ಯಾ ಸಂಸ್ಥೆಯ ಜೀರ್ಣೋದ್ದಾರ ಮಾಡುವ ಸಲುವಾಗಿ ನೂತನ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ೧೯೫೪ರಲ್ಲಿ ಮಧುವನಹಳ್ಳಿಯ ಸಣ್ಣಪ್ಪಗೌಡರು ದಾನವಾಗಿ ನೀಡಿದ ನಿವೇಶನದಲ್ಲಿ ಈ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲಾಯಿತು ೭೧ ವರ್ಷ ತುಂಬಿರುವ ಇದಕ್ಕೆ
ಆಧುನಿಯಕ ಸ್ಪರ್ಷ ನೀಡಲು ನಿರ್ಧರಿಸಲಾಗಿದೆ ಎಂದರು.
ಈ ಸಂಸ್ಥೆಯಲ್ಲಿ ಕಲಿತಂತಹ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಅತ್ತುನ್ನತ ಹುದ್ದೆಗಳನ್ನು ಪಡೆದಿದ್ದಾರೆ ಇದು ಸಂಸ್ಥೆಗೆ ಬಂದoತಹಾ ಕೀರ್ತಿಯಾಗಿದೆ ಎಂದ ಶಾಸಕರು ಇನ್ನಷ್ಟು ಸಧೃಡವಾಗಿ ಸಂಸ್ಥೆಯನ್ನು ಬೆಳೆಸಬೇಕಾದ್ದದ್ದು ತಾಲೂಕು ಕುರುಬರ ಸಂಘದ ಪದಾಧಿಕಾರಿಗಳು, ಸಮಾಜದ ಸ್ವಾಮೀಜಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳ ಜವಬ್ದಾರಿಯಾಗಿದೆ ಇದನ್ನು ಅರಿತು ಎಲ್ಲರೂ ಸಂಸ್ಥೆಯ ಏಳಿಗೆಗಾಗಿ ದುಡಿಯಬೇಕು ಎಂದು ಮನವಿ ಮಾಡಿದರು.
ಸಂಸ್ಥೆಯ ಕಾರ್ಯದರ್ಶಿಯಾಗಿರುವ ನಾನು ಸಮಾಜದ ಹಿರಿಯ ಮುಖಂಡರೂ ಆದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಏಳಿಗೆಗಾಗಿ ದುಡಿಯುವುದರ ಜತೆಗೆ ಈ ಸ್ಥಳದಲ್ಲಿ ನನ್ನ ಅಧಿಕಾರವಧಿಯಲ್ಲಿ ದೊಡ್ಡ ಮಟ್ಟದ ಶಿಕ್ಷಣ ಕಾಂಪಸ್ ಮಾಡುತ್ತೇನೆಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ ಟಿ.ಮರಿಯಪ್ಪ ಸ್ಮಾರಕ ವಿದ್ಯಾ ಸಂಸ್ಥೆಗೆ ಆಧುನೀಯ
ಆಯಮ ಕೊಡುವ ಮೂಲಕ ಹಿಂದುಳಿದ ಮತ್ತು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ
ಕ್ರಮ ವಹಿಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿಸಿದರು.
ಕುರುಬ ಸಮಾಜದವರ ನೂರಾರು ಮಂದಿ ದಾನಿಗಳ ಸಹಕಾರದಿಂದ ಕಟ್ಟಿ ಬೆಳೆಸಿದ ಈ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಲು ವಿದ್ಯಾರ್ಥಿಗಳು ಮತ್ತು ಪೋಷಕರು ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಕೋರಿದ ಎಚ್.ವಿಶ್ವನಾಥ್ ಒಂದನೇ ತರಗತಿಯಿಂದ ಪದವಿ ಶಿಕ್ಷಣದವರೆಗೂ ತರಗತಿಗಳನ್ನು ಆರಂಭಿಸಲು ಚಿಂತಿಸಿದ್ದು ಇದಕ್ಕೆ ಶಾಸಕರು ಸೇರಿದಂತೆ ಸಮುದಾಯದ ಬಾಂಧವರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾಗಿನೆಲೆ ಕನಕಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮಿಜೀ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚರ‍್ನಹಳ್ಳಿಶಿವಣ್ಣ, ಜಿ.ಪಂ ಮಾಜಿ ಸದಸ್ಯರಾದ ಜಿ.ಆರ್.ರಾಮೇಗೌಡ, ಮಾರ್ಚಹಳ್ಳಿಶಿವರಾಮು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಸ್.ಸಿದ್ದೇಗೌಡ, ಪುರಸಭೆ ಸದಸ್ಯ ನಟರಾಜು, ನಿವೃತ ಡಿಹೆಚ್‌ಒ ಡಾ.ಎಸ್.ಎಂ.ಮಾಲೇಗೌಡ, ಕುರುಬರ ಸಂಘದ ಪದಾಧಿಕಾರಿಗಳಾದ ಪ್ರಕಾಶ್, ಕೆ.ಎಂ.ಶ್ರೀನಿವಾಸ್,
ರಾಮಕೃಷ್ಣೇಗೌಡ, ಮೂಡಲಕೊಪ್ಪಲುಕೃಷ್ಣೇಗೌಡ, ಅಪ್ಪಾಜಿಗೌಡ, ಬಿ.ಎಂ.ಗಿರೀಶ್, ಬಿ.ಎಂ.ನಾಗರಾಜು ಮತ್ತಿತರರು ಇದ್ದರು.