Friday, April 18, 2025
Google search engine

Homeರಾಜ್ಯಸುದ್ದಿಜಾಲಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ದೇವಾಲಯದ ಆಭರಣಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡುಗೆ

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ದೇವಾಲಯದ ಆಭರಣಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡುಗೆ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಇತಿಹಾಸ ಪ್ರಸಿದ್ಧ ಚುಂಚನಕಟ್ಟೆ ಶ್ರೀರಾಮದೇವರ ದೇವಾಲಯದ ದೇವರ ಆಭರಣಗಳನ್ನು ಸೂಕ್ತ ಭದ್ರತೆಯೊಂದಿಗೆ ಕೆ ಆರ್ ನಗರ ಖಜಾನೆಗೆ ಇಂದು ವಿದ್ಯುಕ್ತವಾಗಿ ತಲುಪಿಸಲಾಯಿತು.

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ದೇವಾಲಯದ ಆವರಣದಲ್ಲಿ ಆಭರಣಗಳಿಗೆ ಪೂಜೆ ಸಲ್ಲಿಸಿ ನಂತರ ದೇವಾಲಯದ ಇ ಓ ರಘು ರವರು ಮಾತನಾಡಿ ಶಾಸಕರಾದ ಡಿ ರವಿಶಂಕರ್ ರವರ ಮಾರ್ಗದರ್ಶನದಲ್ಲಿ ದನಗಳ ಜಾತ್ರೆ ಮತ್ತು ಬ್ರಹ್ಮ ರಥೋತ್ಸವ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ನಿರ್ವಿಘ್ನವಾಗಿ ಹಾಗೂ ಅದ್ದೂರಿಯಾಗಿ ಮುಗಿದಿದ್ದು ದೇವಾಲಯದ ಪರವಾಗಿ ಸಹಕಾರ ನೀಡಿದ ಶಾಸಕರಾದ ರವಿಶಂಕರ್ ಮತ್ತು ಕುಟುಂಬ ತಹಸಿಲ್ದಾರ್ ಎಸ್ಎನ್ ನರಗುಂದ, ಉಪತಹಶೀಲ್ದಾರ್ ಶರತ್ ಕುಮಾರ್, ಪಾರು ಪತ್ತೆದಾರರಾದ ಯತಿರಾಜ್, ಕುಪ್ಪೆ ಗ್ರಾಮ ಪಂಚಾಯಿತಿ ಉತ್ಸವ ಸನ್ನಿಧಿ ಅರ್ಚಕರಾದ ಶ್ರೀನಿವಾಸ ಭಟ್ಟರು, ಪರಿಚಾರಕರಾದ ವಾಸುದೇವನ್, ನಾರಾಯಣ ಅಯ್ಯಂಗಾರ್, ದೇವಾಲಯದ ಸಹಾಯಕ ಸಿಬ್ಬಂದಿಗಳು ಭದ್ರತೆ ವ್ಯವಸ್ಥೆ ಮಾಡಿಕೊಟ್ಟ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು.

RELATED ARTICLES
- Advertisment -
Google search engine

Most Popular