Saturday, August 2, 2025
Google search engine

Homeಅಪರಾಧಬಿಗ್ ಬಾಸ್ ಖ್ಯಾತಿಯ ನಟ ರಕ್ಷಕ್ ಬುಲೆಟ್ ವಾಹನ ಡಿಕ್ಕಿ; ಯುವಕನ ಕಾಲು ಮುರಿತ!

ಬಿಗ್ ಬಾಸ್ ಖ್ಯಾತಿಯ ನಟ ರಕ್ಷಕ್ ಬುಲೆಟ್ ವಾಹನ ಡಿಕ್ಕಿ; ಯುವಕನ ಕಾಲು ಮುರಿತ!

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟ ರಕ್ಷಕ್ ಚಾಲನೆಯಲ್ಲಿದ್ದ ಬುಲೆಟ್ ಕಾರು ಬೈಕ್‌ಗೆ ಡಿಕ್ಕಿ ಹೊಡೆದು, ಯುವಕನ ಎಡ ಕಾಲು ಮುರಿದ ಘಟನೆ ಗುರುವಾರ ಬೆಳಗ್ಗೆ 11:30ರ ಸುಮಾರಿಗೆ ನಡೆದಿದೆ. ಅಪಘಾತದಲ್ಲಿ ಶಿಡ್ಲಘಟ್ಟ ಮೂಲದ ವೇಣುಗೋಪಾಲ ಎಂಬ ಯುವಕ ಗಾಯಗೊಂಡಿದ್ದು, ಅತಿದುರ್ದೈವದಾಗಿ ಮೂಳೆ ಮುರಿದಿದೆ. ಅವನು ಸ್ನೇಹಿತೆಯೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದಾಗ, ಮಾನ್ಯತಾ ಟೆಕ್ಪಾರ್ಕ್ ಬಳಿ ನಟ ರಕ್ಷಕ್ ಅವರ ಅಜಾಗರೂಕ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ.

ಗಾಯಗೊಂಡ ಯುವಕನನ್ನು ತಕ್ಷಣವೇ ಟ್ಯಾಕ್ಸಿಯಲ್ಲಿ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಯ ಕುರಿತಂತೆ ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

RELATED ARTICLES
- Advertisment -
Google search engine

Most Popular