ಪಿರಿಯಾಪಟ್ಟಣ: ಪಿರಿಯಾಪಟ್ಟಣದ ಹರವೆ ಮಲ್ಲರಾಜಪಟ್ಟಣದ ವಿದ್ಯಾವಿಕಾಸ ಕಾಲೇಜಿನ ಆವರಣದಲ್ಲಿ ಜ.19ರ ಭಾನುವಾರ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ರೈತರ ಮಕ್ಕಳಿಗಾಗಿ ಉಚಿತ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಪರಮ ಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜಯಂತ್ಯುತ್ಸವ ಅಂಗವಾಗಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಉದ್ಯೋಗಾಂಕ್ಷಿಗಳಿಗೆ ಈ ಮೇಳವು ಸಂಪೂರ್ಣ ಉಚಿತವಾಗಿದ್ದು, ಪ್ರತಿ ಅಭ್ಯರ್ಥಿಯು 5 ಕಂಪನಿಗಳಿಗೆ ಸಂದರ್ಶನ ನೀಡಬಹುದಾಗಿದೆ.
ಎಸ್ಎಸ್ಎಲ್ ಸಿ, ಪಿಯುಸಿ, ವಿವಿಧ ಕೋರ್ಸ್ ಗಳ ಪದವಿ (ಪಾಸ್, ಫೇಲ್), ITI , ಡಿಪ್ಲೋಮ, ಇಂಜಿನಿಯರಿಂಗ್, ಸ್ನಾತಕೋತರ ಪದವಿದಾರರು ಈ ಮೇಳದಲ್ಲಿ ಭಾಗವಹಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಮೇಳದಲ್ಲಿ ಸುಮಾರು 50 ಕಂಪನಿಗಳು ಭಾಗವಹಿಸಲಿದ್ದು, 2000ಕ್ಕಿಂತ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿದೆ. ಈ ಮೇಳದಲ್ಲಿ ವಿಶೇಷವಾಗಿ ವಿಶೇಷ ಚೇತನ ಹಾಗೂ ಅಂಗವಿಕಲರಿಗೂ ಉದ್ಯೋಗ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೋಹನ್ ಮೊ.9686564192, ಶಿವಕುಮಾರ್ ಮೊ.6363144181 ಸಂಪರ್ಕಿಸಲು ಕೋರಲಾಗಿದೆ ಎಂದು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ತಿಳಿಸಿದ್ದಾರೆ.