ಬೆಂಗಳೂರು: ಚುನಾವಣೆಯ ಹಿನ್ನೆಲೆಯಲ್ಲಿ, ಬೆಂಗಳೂರು ಉತ್ತರ ಬಿ.ಜೆ.ಪಿ (ಎನ್ ಡಿ ಎ) ಅಭ್ಯರ್ಥಿಯಾದ ಕುಮಾರಿ ಶೋಭಾ ಕರಂದ್ಲಾಜೆ ಅವರ ಪರವಾಗಿ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವರಾದ ಕೆ .ಗೋಪಾಲಯ್ಯನವರು ಬೃಹತ್ ಬೈಕ್ ರ‍್ಯಾಲಿಯನ್ನು ಆಯೋಜಿಸಿದ್ದರು.
ಈ ರ‍್ಯಾಲಿಯಲ್ಲಿ ಗೋಪಾಲಯ್ಯರವರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ ವಿಜಯೇಂದ್ರ, ಅಭ್ಯರ್ಥಿ ಕುಮಾರಿ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ನೆ.ಲ ನರೇಂದ್ರಬಾಬು, ಮಾಜಿ ಉಪಮಹಾಪೌರರಾದ ಶ್ರೀಮತಿ ಹೇಮಲತಾ ಗೋಪಾಲಯ್ಯ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಮುಖಂಡರುಗಳು ಭಾಗವಹಿಸಿದ್ದರು.
ಬೈಕ್ ರ‍್ಯಾಲಿಗೂ ಮೊದಲು ವೃಷಭಾವತಿ ನಗರದ ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಆಶೀರ್ವಾದವನ್ನು ಪಡೆದು ರ‍್ಯಾಲಿಯನ್ನು ಪ್ರಾರಂಭಿಸಲಾಯಿತು.
ಕ್ಷೇತ್ರದ ಎಲ್ಲಾ ವಾರ್ಡುಗಳ ವ್ಯಾಪ್ತಿಯಲ್ಲಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಸೇರಿದ್ದ ಸಾವಿರಾರು ಸಂಖ್ಯೆಯ ಜನಸ್ತೋಮವನ್ನು ನೋಡಿ ಬಿ.ವೈ.ವಿಜಯೇಂದ್ರರವರು ಎನ್.ಡಿ.ಎ. ಪಕ್ಷದ ಗೆಲುವಿಗೆ ಇಲ್ಲಿ ನೆರೆದಿರುವ ಜನಸ್ತೋಮವೇ ಪ್ರತ್ಯಕ್ಷ ಸಾಕ್ಷಿ ಎಂದು ಹೇಳಿದರು. ಅಭ್ಯರ್ಥಿ ಶೋಭಾ ಕರಂದ್ಲಾಜೆರವರು 26ನೇ ತಾರೀಖು ಎಲ್ಲರೂ ಯಾವುದೇ ಕೆಲಸಗಳಿದ್ದರೂ, ಈ ದೇಶದ ಅಭಿವೃದ್ಧಿಗಾಗಿ ಬಿಡುವು ಮಾಡಿಕೊಂಡು ಬಿಜೆಪಿಯ ಕಮಲದ ಗುರುತಿಗೆ ಮತದಾನ ಮಾಡಬೇಕೆಂದು ಕೇಳಿಕೊಂಡರು.
ಸ್ಥಳೀಯ ಶಾಸಕರಾದ ಕೆ.ಗೋಪಾಲಯ್ಯರವರು ಲಕ್ಷಾಂತರ ಮತಗಳ ಅಂತರದಿಂದ ಬಿಜೆಪಿ ಎನ್.ಡಿ.ಎ ಅಭ್ಯರ್ಥಿಯಾದ ಕುಮಾರಿ ಶೋಭಾ ಕರಂದ್ಲಾಜೆಯವರನ್ನು ಗೆಲ್ಲಿಸುವಂತೆ ಕೋರಿದರು.