Friday, April 18, 2025
Google search engine

Homeಸಿನಿಮಾಕಿಚ್ಚ ಸುದೀಪ್ ಹೊಸ ಸಿನಿಮಾದ ಬಗ್ಗೆ ಬಿಗ್ ಅಪ್ ಡೇಟ್

ಕಿಚ್ಚ ಸುದೀಪ್ ಹೊಸ ಸಿನಿಮಾದ ಬಗ್ಗೆ ಬಿಗ್ ಅಪ್ ಡೇಟ್

‘ವಿಕ್ರಾಂತ್ ರೋಣ’ ಸಿನಿಮಾದ ನಂತರ ‘ಕಿಚ್ಚ’ ಸುದೀಪ್ ಅವರ ಹೊಸ ಚಿತ್ರ ಯಾವುದು ಎಂಬ ಬಗ್ಗೆ ಈಗಾಗಲೇ ಸುಳಿವು ಸಿಕ್ಕಿದೆ. ತಮಿಳಿನಲ್ಲಿ ‘ಕಬಾಲಿ’, ‘ತುಪ್ಪಾಕಿ’, ‘ಅಸುರನ್’, ‘ಕರ್ಣನ್’ ಥರದ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಕಲೈಪುಲಿ ಎಸ್ ಧಾನು ಅವರ ಜೊತೆಗೆ ಕಿಚ್ಚ ಸುದೀಪ್ ಕೈಜೋಡಿಸಿದ್ದಾರೆ. ಇದು ಸುದೀಪ್ ಅವರ 46ನೇ ಸಿನಿಮಾ ಎಂಬುದು ಮತ್ತೊಂದು ವಿಶೇಷ.

ಆದರೆ ಈ ಸಿನಿಮಾ ಯಾವಾಗ ಶುರು? ಟೈಟಲ್ ಘೋಷಣೆ ಯಾವಾಗ? ನಿರ್ದೇಶಕರು ಯಾರು ಅನ್ನೋ ಪ್ರಶ್ನೆಗಳು ಮಾತ್ರ ಹಾಗೆಯೇ ಇವೆ. ಅದಕ್ಕೀಗ ಉತ್ತರ ಸಿಗುವ ಸಮಯ ಬಂದಿದೆ.

ನಟ ಕಿಚ್ಚ ಸುದೀಪ್ ಅವರು ಶುಕ್ರವಾರ ರಾತ್ರಿ ತಮ್ಮ ಹೊಸ ಸಿನಿಮಾದ ಅಪ್ಡೇಟ್ ಬಗ್ಗೆ ಟ್ವೀಟ್ ಮಾಡಿ, ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ‘ನನ್ನ ಮುಂದಿನ 46ನೇ ಸಿನಿಮಾದ ಟೀಸರ್ (ಒಂದು ಸಣ್ಣ ಇಣುಕು ನೋಟ) ತಯಾರಾಗಿದೆ. ಆದರೆ ಜೂನ್ 25ರಂದು ಸಂಚಿತ್ ಸಂಜೀವ್ ನಟನೆಯ ಚೊಚ್ಚಲ ಸಿನಿಮಾದ ಅನೌನ್ಸ್ ಮೆಂಟ್ ಟೀಸರ್ ರಿಲೀಸ್ ಆಗಲಿದೆ. ನಾವೆಲ್ಲರೂ ಅದಕ್ಕಾಗಿ ಕಾಯುತ್ತಿದ್ದೇವೆ. ನನ್ನ ಮುಂದಿನ ಸಿನಿಮಾದ ಟೀಮ್ ತುಂಬ ಕಠಿಣ ಶ್ರಮ ಹಾಕಿ ಕೆಲಸ ಮಾಡುತ್ತಿದೆ. ಟೀಸರ್ ಅನ್ನು ನಿಮ್ಮ ಮುಂದೆ ತರಲು ಎಲ್ಲರೂ ಉತ್ಸುಕರಾಗಿದ್ದಾರೆ’ ಎಂದು ‘ಕಿಚ್ಚ’ ಸುದೀಪ್ ಹೇಳಿದ್ದಾರೆ.

ಜೂನ್ 27ರಂದು ಟೀಸರ್ ರಿಲೀಸ್   

ಸದ್ಯ ‘ಕಿಚ್ಚ’ ಸುದೀಪ್ ಅವರು ಟ್ವೀಟ್ ಮಾಡಿರುವ ಮಾಹಿತಿ ಪ್ರಕಾರ, ಜೂನ್ 27ರಂದು ಹೊಸ ಸಿನಿಮಾದ ಟೀಸರ್ ರಿಲೀಸ್ ಡೇಟ್ ಘೋಷಣೆ ಆಗಲಿದೆ. ಒಟ್ಟಿನಲ್ಲಿ ಟೀಸರ್ ಹೇಗಿದೆಯೋ? ನಿರ್ದೇಶಕರು ಯಾರು? ಟೈಟಲ್ ಏನು ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಫ್ಯಾನ್ಸ್ ಅಂತೂ ಸಖತ್ ಎಕ್ಸೈಟ್ ಆಗಿದ್ದಾರೆ. ‘ಕಿಚ್ಚ’ ಸುದೀಪ್ ಅವರು ಕೂಡ ಈ ತಂಡದ ಜತೆಗೆ ಕೆಲಸ ಮಾಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಹೊಸ ನಿರ್ದೇಶಕರೊಬ್ಬರು ಈ ಸಿನಿಮಾವನ್ನು ಡೈರೆಕ್ಟ್ ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಇದೆ.

RELATED ARTICLES
- Advertisment -
Google search engine

Most Popular