ಸಾವೊ ಪಾಲೊ (ಬ್ರೆಜಿಲ್): ಫುಟ್‌ಬಾಲ್ ಆಟಗಾರ ನೇಮಾರ್ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ. ಅಮೆಜಾನ್ ನಗರದ ಬೆಲ್ಮ್‌ನಲ್ಲಿ ಬೊಲಿವಿಯಾ ವಿರುದ್ಧದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ೬೧ ನೇ ನಿಮಿಷದಲ್ಲಿ ೭೮ನೇ ಗೋಲ್‌ಗಳಿಸಿ ನೇಮಾರ್ ಮೂರು ಬಾರಿ ವಿಶ್ವಕಪ್ ವಿಜೇತರಾಗಿದ್ದ ಪೀಲೆ ಅವರ ದಾಖಲೆಯನ್ನೇ ಮುರಿದಿದ್ದಾರೆ. ಈ ಮೂಲಕ ನೇಮಾರ್ ಬ್ರೆಜಿಲ್ ರಾಷ್ಟ್ರೀಯ ತಂಡದ ಅಗ್ರ ಗೋಲ್ ಸ್ಕೋರರ್ ಎನಿಸಿಕೊಂಡಿದ್ದಾರೆ. ೫-೧ ಅಂತರದಲ್ಲಿ ಬ್ರೆಜಿಲ್ ಗೆಲುವು ಕಂಡಿದೆ.
ಬೊಲಿವಿಯಾ ವಿರುದ್ಧದ ಪಂದ್ಯದಲ್ಲಿ ನೇಮಾರ್ ೬೧ನೇ ನಿಮಿಷದಲ್ಲಿ ಐತಿಹಾಸಿಕ ಗೋಲು ದಾಖಲಿಸಿದರು. ಇದು ಬ್ರೆಜಿಲ್‌ಗೆ ಪಂದ್ಯದಲ್ಲಿ ನಾಲ್ಕನೇ ಗೋಲು ಆಗಿತ್ತು. ಪಂದ್ಯದ ೧೭ ನೇ ನಿಮಿಷದಲ್ಲಿ, ನೇಮಾರ್ ಪೆನಾಲ್ಟಿಯನ್ನು ತಪ್ಪಿಸಿಕೊಂಡರು. ಅದನ್ನು ಬೊಲಿವಿಯನ್ ಗೋಲ್ ಕೀಪರ್‌ಬಿಲ್ಲಿ ವಿಸ್ಕಾರ ಅವರು ಚಾಣಾಕ್ಷತನದಿಂದ ಉಳಿಸಿಕೊಂಡರು. ಈ ಪೆನಾಲ್ಟಿ ಮೂಲಕ ಅವರು ಈಗಾಗಲೇ ಪೀಲೆಯವರ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದಿತ್ತು.