ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಬಿಗ್ ಬಾಸ್ ಸೀಸನ್ 12 ರಲ್ಲಿ ಗಿಲ್ಲಿ ನಟರಾಜು ಹಳ್ಳಿ ಹೈದ ಗೆಲ್ಲಬೇಕೆಂದು ಇತಿಹಾಸ ಪ್ರಸಿದ್ದ ಚುಂಚನಕಟ್ಟೆ ಶ್ರೀರಾಮ ರಥೋತ್ಸವದಲ್ಲಿ ಅಭಿಮಾನಿಗಳು 101 ಈಡುಗಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು.
ಕುಪ್ಪೆ ಸಹಕಾರ ಸಂಘದ ನಿರ್ದೇಶಕ ಸಿ.ಡಿ.ಪುನೀತ್ ಧನಪಾಲ್, ಸಾಲಿಗ್ರಾಮ ತಾಲೂಕು ಸಂಗೊಳ್ಳಿ ರಾಯಣ್ಣ ಯುವ ವೇದಿಕ ಅಧ್ಯಕ್ಷ ಚಿಕ್ಕಕೊಪ್ಪಲು ಅರುಣ್ ಕಲ್ಲಹಟ್ಟಿ, ಎಳನೀರು ಉದ್ಯಮಿ ನಿತಿನ್ ಲವಣ್ಣ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು ಗಿಲ್ಲಿ ನಟರಾಜು ಗೆಲುವಿಗಾಗಿ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿ ಮಂಡ್ಯ ಜಿಲ್ಲೆಯ ಮಳವಳ್ಳಿಯ ದಡದ ಪುರದ ಗಿಲ್ಲಿ ನಟರಾಜು ಅವರು ಪಕ್ಕ ಹಳ್ಳಿ ಹುಡುಗನಾಗಿ ಕಿರುತರೆ ಹಾಸ್ಯ ನಟನಾಗಿ ತನ್ನದೇ ಆದ ಚಾಪು ಮೂಡಿಸಿದ್ದು ಇವನ ಗೆಲುವಿಗೆ ರಾಜ್ಯದ ಜನರು ಸಾಮಾಜಿಕ ಜಾಲ ತಾಣದಲ್ಲಿ ಓಟ್ ಮಾಡುವ ಮೂಲಕ ಗೆಲುವಿಗೆ ಕಾರಣರಾಗಬೇಕೆಂದರು.
ಈ ಸಂದರ್ಭದಲ್ಲಿ ಗಿಲ್ಲಿ ನಟರಾಜು ಅಭಿಮಾನಿಗಳಾದ ಕುಪ್ಪೆ ಅಭಿ, ಕಾರ್ತೀಕ್ ಕಲ್ಲಹಟ್ಟಿ, ಕಾರ್ತಿಕ್, ಹೇಮಂತ್, ಕಾರ್ತಿ ಕುಬೇರ, ರವಿ, ಚರಣ್, ಮಾದ, ದರ್ಶನ್, ಗಗನ್, ಕಾರ್ತಿ ,ತಿಲಕ್, ಶ್ರೇಯಶ, ಕಿರಣ್, ಪವನ್, ಮನು, ಅಮಿತ್, ಕಾರಂತ್, ಶರತ್, ರೇವಣ್ಣ, ಯೋಗೇಶ್, ಗಿರೀಶ್, ಗಂದನಹಳ್ಳಿ ಹೇಮಂತ್ ಇದ್ದರು.



