ಬೆಂಗಳೂರು : ವಿಧಾನಸಭೆಯ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಎನ್ನುವವರಿಗೆ ಬಿಗ್ ಬಾಸ್ ಸ್ಪರ್ಧಿ ಚೈತ್ರ ಅವರು 5 ಕೋಟಿ ಪಡೆದು ವಂಚನೆ ಎಸಗಿದ್ದರು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಚೈತ್ರ ಅವರು ಇಂದು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೋರ್ಟ್ ಗೆ ಹಾಜರಾಗಿದ್ದರೆ. ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಚೈತ್ರ ಇಂದು ನ್ಯಾಯಾಲಯಕ್ಕೆ ಹಾಜರಾದರು. ಬಿಗ್ ಬಾಸ್ ಮನೆಯಿಂದ ಹೊರಬಂದು ಚೈತ್ರ ಕೋರ್ಟಿಗೆ ಹಾಜರಾದರು.ಚೈತ್ರ ಶ್ರೀಕಾಂತ್ ಸೇರಿದಂತೆ ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದರು.
ಈ ವೇಳೆ ವಾರೆಂಟ್ ರಿ ಕಾಲ್ ಮಾಡಿಸಿಕೊಂಡು ಚೈತ್ರ ಮತ್ತೆ ಬಿಗ್ ಬಾಸ್ ಗೆ ತೆರಳಿದ್ದಾರೆ. 1ನೇ ಎಸಿಎಂ ನ್ಯಾಯಾಧೀಶರ ಮುಂದೆ ಚೈತ್ರ ಹಾಜರಾಗಿದ್ದರು.ಈ ಹಿಂದೆ ವಂಚನೆ ಕೇಸ್ ನಲ್ಲಿ ಸಿಸಿಬಿ ಅಧಿಕಾರಿಗಳು ಚೈತ್ರ ಅವರನ್ನು ಅರೆಸ್ಟ್ ಮಾಡಿದರು.ಮುಂದಿನ ವಿಚಾರಣೆ 2025 ಜನವರಿ 13ರಂದು ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ.