Monday, April 21, 2025
Google search engine

Homeರಾಜ್ಯಬಿಹಾರ: ೯ ದಿನಗಳಲ್ಲಿ ೫ನೇ ಸೇತುವೆ ಕುಸಿತ

ಬಿಹಾರ: ೯ ದಿನಗಳಲ್ಲಿ ೫ನೇ ಸೇತುವೆ ಕುಸಿತ

ಬಿಹಾರ: ಕಳೆದ ಒಂಭತ್ತು ದಿನಗಳಲ್ಲಿ ಐದನೇ ಸೇತುವೆ ಕುಸಿದು ಬಿದ್ದಿದೆ. ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ರಾಷ್ಟ್ರೀಯ ಜನತಾ ದಳ ನಾಯಕ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದ್ದಾರೆ.

ಮಧುಬನಿ ಮತ್ತು ಸುಪೌಲ್ ನಡುವಿನ ಭೂತಾಹಿ ನದಿಯ ಸೇತುವೆಯ ಕುಸಿತದ ಕುರಿತು ಯಾದವ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಭಿನಂದನೆಗಳು! ಬಿಹಾರದಲ್ಲಿ ಡಬಲ್ ಇಂಜಿನ್ ಸರ್ಕಾರದ ಡಬಲ್ ಪವರ್‌ನಿಂದಾಗಿ ಕೇವಲ ೯ ದಿನಗಳಲ್ಲಿ ಸೇತುವೆ ಮಾತ್ರ ಕುಸಿದಿವೆ. ಮಧುಬನಿ-ಸುಪೌಲ್ ನಡುವೆ ಭೂತಾಹಿ ನದಿಯಲ್ಲಿ ಹಲವು ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿದೆ. ನೀವು ಈ ಬಗ್ಗೆ ಗಮನಿಸಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ,ಡಬಲ್ ಎಂಜಿನ್ ಎನ್‌ಡಿಎ ಸರ್ಕಾರವು ೯ ದಿನಗಳಲ್ಲಿ ೫ ಸೇತುವೆ ಕುಸಿತದೊಂದಿಗೆ ಬಿಹಾರದ ಜನತೆಗೆ ಮಂಗಳರಾಜ್ ಕಲ್ಯಾಣದ ಶುಭ ಹಾರೈಸಿದೆ ಎಂದಿದ್ದಾರೆ.

ಸೇತುವೆಗಳ ಕುಸಿತದಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿರುವ ಸ್ವಯಂಘೋಷಿತ ಪ್ರಾಮಾಣಿಕರು ಇದನ್ನು ಭ್ರಷ್ಟಾಚಾರ ಎಂದು ಕರೆಯುವ ಬದಲು ಸಭ್ಯತೆ ಎಂದು ಕರೆಯುತ್ತಿದ್ದಾರೆ. ವಿರೋಧ ಪಕ್ಷಗಳಿಗೆ ಭ್ರಷ್ಟಾಚಾರದ ಸರ್ಟಿಫಿಕೇಟ್ ಹಂಚುವ, ಪಕ್ಷಪಾತಿ ಪತ್ರಿಕೋದ್ಯಮದಲ್ಲಿ ಭೂಮಿ-ಆಕಾಶದ ಎಲ್ಲ ಶ್ರೇಯಾಂಕಗಳಲ್ಲಿ ವಿಶ್ವವಿಜೇತ ಎಂದು ಗೋದಿ ಮಾಧ್ಯಮಗಳಿಂದ ಪ್ರಮಾಣಪತ್ರ ಪಡೆದ ಸತ್ಯವಂತ ಮತ್ತು ವಿಶ್ವಗುರು ಈ ವಿನಾಶದ ಬಗ್ಗೆ ಯಾಕೆ ಬಾಯಿ ತೆರೆಯುವುದಿಲ್ಲ ಎಂದು ಹೇಳಿದ್ದಾರೆ.

ಸೇತುವೆಗಳು ಜಲ ಸಮಾಧಿಯಾಗಿವೆ. ಇದಕ್ಕೆ ವಿರೋಧ ಪಕ್ಷದ ನಾಯಕರು ರಾಜೀನಾಮೆ ನೀಡಬೇಕು ಎಂದು ಸರ್ಕಾರವನ್ನು ಕಾಲೆಳೆದು ವ್ಯಂಗ್ಯ ಮಾಡಿದ್ದಾರೆ. ಸದ್ಯ ಸೇತುವೆ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

RELATED ARTICLES
- Advertisment -
Google search engine

Most Popular