ಮಂಗಳೂರು (ದಕ್ಷಿಣ ಕನ್ನಡ): ಬೈಕ್ ಅಪಘಾತದಿಂದಾಗಿ ಸುಳ್ಯದ ವೀರಮಂಗಲ ನಿವಾಸಿಯಾಗಿದ್ದ ಉಪನ್ಯಾಸಕಿ ಸುನಂದ ಅಚ್ಚುತ ಪೂಜಾರಿ ಮೃತಪಟ್ಟಿದ್ದಾರೆ.
6 ದಿನಗಳ ಹಿಂದೆ ಪುತ್ತೂರು ತಾಲೂಕಿನ ಈಶ್ವರಮಂಗಲದ ಮೇನಾಲ ಎಂಬಲ್ಲಿ ಅಪಘಾತ ನಡೆದಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ಅತಿಥಿ ಉಪನ್ಯಾಸಕಿ ಚಿಕಿತ್ಸೆ ಪಡೆಯುತ್ತಿದ್ದರು. ಪುತ್ತೂರು ತಾಲೂಕಿನ ಮಾಡಾವು ಜ್ಯೂನಿಯರ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದರು.
ಕಳೆದ ಶುಕ್ರವಾರ ಸುನಂದ ಅವರು ತಮ್ಮ ಕುಟುಂಬದ ತರವಾಡು ಮನೆಯಾದ ಈಶ್ವರಮಂಗಲದ ಮೇನಾಲಕ್ಕೆ ಹೋಗುತ್ತಿದ್ದರು. ಬೈಕಲ್ಲಿ ಹೋಗುತ್ತಿರುವಾಗ ಮಳೆ ಬಂದ ಕಾರಣಕ್ಕಾಗಿ ಬೈಕಲ್ಲಿ ಕೊಡೆ ಬಿಡಿಸಿದ್ದರು. ಗಾಳಿಗೆ ಕೊಡೆ ಎಳೆಯಲ್ಪಟ್ಟು ಬೈಕಿಂದ ಜಾರಿ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಭಾಗಕ್ಕೆ ಗಂಭೀರ ಗಾಯಗೊಂಡಿದ್ದರು. ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಉಪನ್ಯಾಸಕಿ ಮೃತಪಟ್ಟಿದ್ದಾರೆ.