ಹೊಸೂರು : ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ ಮತ್ತೋರ್ವ ಗಂಬೀರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್.ನಗರ ತಾಲೂಕಿನ ಕೆಸ್ತೂರು ಗೇಟ್ ಬಳಿ ನಡೆದಿದೆ.
ಘಟನೆಯಲ್ಲಿ ಶ್ರೀರಾಮಪುರ ಗ್ರಾಮದವರಾದ ಶಿವಶಂಕರ್(50) ಎಂಬುವರೇ ಮೃತಪಟ್ಟವರಾಗಿದ್ದು ಮೃತರು ತಾಲೂಕಿನ ಗಂಧನಹಳ್ಳಿ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಮತ್ತೊಂದು ಬೈಕಿನಲ್ಲಿದ್ದ ಮುಂಡೂರು ಗ್ರಾಮದ ಸ್ವಾಮಿ ಅವರಿಗೆ ಗಂಬೀರವಾಗಿ ಗಾಯವಾಗಿದ್ದು ಇವರನ್ನು ಇದೇ ರಸ್ತೆಯಲ್ಲಿ ಹೋಗುತ್ತಿದ್ದ ವಕೀಲ ಡಿ.ಕೆ.ಕೊಪ್ಪಲು ಹರೀಶ್ ಅವರು ಅಂಬುಲೈನ್ಸ್ ಕರೆಸಿ ಕೆ.ಆರ್.ನಗರದ ವಿಸ್ಮಯ ಆಸ್ವತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲು ರವಾನಿಸಿದರು.
ಮೃತ ಶಿವಶಂಕರ್ ಶ್ರೀರಾಮಪುರ ಗ್ರಾಮದಿಂದ ಕೆ.ಆರ್.ನಗರ ಕಡೆ ತೆರಳುತ್ತಿದ್ದ ವೇಳೆ ಕೆ.ಆರ್.ನಗರದಿಂದ ಮೂಂಡೂರು ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಬೈಕ್ ಗಳ ನಡುವೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಕೆ.ಆರ್.ನಗರ ಪೊಲೀಸ್ ಠಾಣೆಯ ಮುಖ್ಯಪೇದೆಗಳಾದ ಜವರೇಶ್,ಸುಬ್ರಮಣ್ಯ ಭೇಟಿ ಪರೀಶೀಲನೆ ನಡೆಸಿದರು ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.