ಹನೂರು : ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮೂರನೇ ತಿರುವಿನಲ್ಲಿ ಬೈಕ್ ಸವಾರ ಸಾವನಪ್ಪಿದ್ದು ಬಸ್ ಗುದ್ದಿರುವ ಶಂಕೆ ವ್ಯಕ್ತವಾಗಿದೆ. ಮಹದೇಶ್ವರ ಬೆಟ್ಟದಲ್ಲಿ ತರಕಾರಿ ವ್ಯಾಪಾರ ಮಾಡುತಿದ್ದ ನಾಗಣ್ಣ ಎಂಬುವವರ ಮೂರನೇ ಮಗನಾದ ಪ್ರವೀಣ್ ( 20 ) ಎಂಬುವವನೇ ಮೃತ ದುರ್ದೈವಿ.
ಪ್ರವೀಣ್ ಹಾಗೂ ಅವರ ಕುಟುಂಬವು ಮಹದೇಶ್ವರ ಬೆಟ್ಟದಲ್ಲಿ ವಾಸವಿದ್ದು, ಮಹದೇಶ್ವರ ಬೆಟ್ಟದ ತಂಭಡಿಗೇರಿಯಲ್ಲಿ ತರಕಾರಿ ವ್ಯಾಪಾರವನ್ನು ಮಾಡುತಿದ್ದರು. ಬೆಟ್ಟದಿಂದ ಪ್ರವೀಣನು ವಡಕೆ ಹಳ್ಳಕ್ಕೆ ತೆರಳುತಿದ್ದ ವೇಳೆ ವಾಹನ ಚಲಾಯಿಸುವಾಗ ಪೋನಿನಲ್ಲಿ ಮಾತನಾಡಿಕೊಂಡು ದ್ವಿಚಕ್ರ ಚಾಲನೆ ಮಾಡುತಿದ್ದ ವೇಳೆ ಪೊನ್ನಾಚಿ ತಿರುವಿನ ಬಳಿ ಎದುರಿಗೆ ಬಸ್ ಬಂದಿದ್ದನ್ನು ಗಮನಿಸದೇ ಪಕ್ಕದ ಹಳ್ಳಕ್ಕೆ ಬೈಕನ್ನು ಬಿಟ್ಟಿದ್ದರಿಂದ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. ಕುಟುಂಬದವರು ಬಸ್ ಗುದ್ದಿ ನಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಆರೋಪವನ್ನುಮಾಡುತ್ತಿದ್ದಾರೆ. ಈ ಸಂಬoದ ಮಹದೇಶ್ವರ ಬೆಟ್ಟದ ಪೋಲೀಸರು ತೆರಳಿ ಖಾಸಗಿ ಬಸ್ಸನ್ನು ವಶಕ್ಕೆ ಪಡೆದುಕೊಂಡಿದ್ದು, ಸಧ್ಯ ತನಿಖೆಯಿಂದ ಸತ್ಯಾಸತ್ಯತೆ ಹೊರಕ್ಕೆ ಬರಲಿದೆ .