Saturday, April 19, 2025
Google search engine

Homeರಾಜ್ಯಬೈಕ್ ಸವಾರರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ: ಡಿವೈಎಸ್ಪಿ ಗೋಪಾಲ ಕೃಷ್ಣ

ಬೈಕ್ ಸವಾರರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ: ಡಿವೈಎಸ್ಪಿ ಗೋಪಾಲ ಕೃಷ್ಣ

ಹುಣಸೂರು: ನಗರ ಮತ್ತು ತಾಲೂಕಿನ  ಬೈಕ್ ಸವಾರರು ಹೆಲ್ಮೆಟ್ ಧರಿಸಿ ಚಾಲನೆ ಮಾಡಬೇಕೆಂದು ಡಿವೈಎಸ್ಪಿ ಗೋಪಾಲ ಕೃಷ್ಣ  ಮನವಿ ಮಾಡಿದರು.

ನಗರದ ಸಂವಿಧಾನ ವೃತ್ತದಲ್ಲಿ ಶುಕ್ರವಾರ ಹುಣಸೂರು ರೋಟರಿ ಸಂಸ್ಥೆ ಹಾಗೂ ನಗರದ ಪೊಲೀಸ್ ಠಾಣೆ ಸಂಯುಕ್ತ ಆಶ್ರಯದಲ್ಲಿ ನಡೆದ ಹೆಲ್ಮೆಟ್ ಧರಿಸಿ ಜಾಥಾ ಜಾಗೃತಿ ಕಾರ್ಯಕ್ರಮದಲ್ಲಿ ಹೆಲ್ಮೆಟ್ ಧರಿಸದೆ ಚಾಲನೆ ಮಾಡುತ್ತಿದ್ದ ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ ಮಾತನಾಡಿದ ಅವರು, ರೋಟರಿ ಸಂಸ್ಥೆ ನಮ್ಮೊಂದಿಗೆ ಕೈ ಜೋಡಿಸಿ. ಜನತೆಗೆ ಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯವೆಂದರು.

ನಗರದ ಕಲ್ಪತರು ವೃತ್ತದಲ್ಲಿ  ಐಟಿಎಂಎಸ್ ತಂತ್ರಜ್ಞಾನ ಯಂತ್ರವನ್ನು ಅಳವಡಿಸಿದ್ದು, ನೀವುಗಳು ಸಂಚರಿಸುವಾಗ ಹೆಲ್ಮೆಟ್ ಧರಿಸದಿದ್ದರೆ. ಅದು ನಿಮ್ಮ ವಹಾನವನ್ನು ಸೆರೆ ಹಿಡಿಯುವ ಮೂಲಕ ನಿಮ್ಮ ಮನೆಗೆ ನೋಟೀಸ್ ಬರಲಿದ್ದು, ನೀವು ದಿನಕ್ಕೆ ಎಷ್ಚು ಸರಿ ಸಂಚಾರ ಮಾಡುತ್ತೀರೊ ಅಷ್ಟು ಬಾರಿಯೂ ದಂಡ ಕಟ್ಟಬೇಕಾಗುತ್ತದೆ ಎಂದರು.

ಸಾರ್ವಜನಿಕರು ಯಾರೇ ಇರಲಿ. ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ. ಕಾನೂನು ನಿಯಮ ಪಾಲಿಸಿ. ಹೆಲ್ಮೆಟ್ ಕಡ್ಡಾಯ ಧರಿಸುವ ಮೂಲಕ, ನಿಮ್ಮ ಪ್ರಾಣ ಉಳಿಸಿ. ಕಾರು ಚಾಲನೆ ಮಾಡುವಾಗ ಬೆಲ್ಟ್ ತಪ್ಪದೆ ಧರಿಸಿ. ಹಾಗೆ ವೀಲಿಂಗ್ , ಅಪ್ರಾಪ್ತ ಮಕ್ಕಳು,  ಚಾಲನೆ ಮಾಡುವುದು, ಮೊಬೈಲ್ ಬಳಕೆ. ಇವುಗಳು ಕಾನೂನು ವಿರುದ್ದವಾಗಿದ್ದು. ಅಂತವರ ವಿರುದ್ಧ ಸೂಕ್ತ ಕ್ರಮಕೈಳ್ಳಬೇಕಾಗುತ್ತದೆ ಎಂದರು.

ರೋಟರಿ ಸಂಸ್ತೆಯ ಅಧ್ಯಕ್ಷ ಡಾ.ಪ್ರಸನ್ನ ಕೆ.ಪಿ. ಮಾತನಾಡಿ, ನಗರದ ಕಲ್ಪತರು ವೃತ್ತ  ಸೇರಿದಂತೆ ಹಲವು ಕಡೆ ಸಿಸಿ ಕ್ಯಾಮರ ಅಳವಡಿಸಿದ್ದು, ನಿಮ್ಮ ಜೀವ ಅಮೂಲ್ಯವಾಗಿದ್ದು. ಪ್ರತಿಯೊಬ್ಬರು ಹೆಲ್ಮೆಟ್  ಧರಿಸಿ ಚಾಲನೆ ಮಾಡುವಂತೆ ಸಾರ್ವಜನಿಕರಿಗೆ ತಿಳಿ ಹೇಳಿದರು.

ಕಾರ್ಯಕ್ರಮದಲ್ಲಿ ನಗರದ ಸಿಪಿಐ ಸಂತೋಷ್ ಕಶ್ಯಪ್,  ಎಸ್. ಐ. ಜಮೀರ್ ಅಹಮ್ಮದ್ ,  ಎಸ್.ಐ ರಾಮಣ್ಣ, ರೋಟರಿ ಹಿರಿಯ ಸದಸ್ಯರಾದ ವಲಯ 6  ರ  ಎಜಿ ಆರ್. ಆನಂದ್,  6ರ ಸೇನಾನಿ ಪಾಂಡುಕುಮಾರ್ ಪಿ.ಡಾ.ವೃಷಬೇಂದ್ರಸ್ವಾಮಿ. ರೊ.ರಾಜಶೇಖರ್, ರೊ.ಸ್ವಾಮಿಗೌಡ, ರೊ.ಚನ್ನಕೇಶವ, ರೊ.ಜಿ.ವಿ.ಶ್ರೀನಾಥ್, ರೊ. ಕಾರ್ಯದರ್ಶಿ ಹೆಚ್.ಆರ್.ಕೃಷ್ಣಕುಮಾರ್ ಇದ್ದರು.

RELATED ARTICLES
- Advertisment -
Google search engine

Most Popular