ಮಂಡ್ಯ: ಹಗಲು ಹೊತ್ತಿನಲ್ಲಿ ಬೈಕ್ ಕಳ್ಳತನ ಮಾಡಿರುವ ಘಟನೆ ಮಂಡ್ಯದ ಸುಭಾಷ್ ನಗರದ ೧ನೇ ಕ್ರಾಸ್ ಬಳಿಯ ಕರಾವಳಿ ಹೋಟೆಲ್ ಬಳಿ ನಡೆದಿದೆ.
ಸುನೀಲ್ ಎಂಬುವವರಿಗೆ ಸೇರಿದ ಏಂ೧೧ ಇಎ೮೯೯೪ ಶೈನ್ ಬೈಕ್ ಕಳ್ಳತನ. ಬೈಕ್ ನಿಲ್ಲಿಸಿ ಪಕ್ಕದಲ್ಲೇ ಇದ್ದ ಮೊಬೈಲ್ ಅಂಗಡಿಯಲ್ಲಿ ಸಲಕರಣೆಗಳ ತೆಗೆಕೊಳ್ಳುತ್ತಿದ್ದ ವೇಳೆ ಬೈಕ್ ಕದ್ದೋಯ್ದ ಖತರ್ನಾಕ್. ಮೊಬೈಲ್ ಅಂಗಡಿ ಬಳಿ ಸ್ವಲ್ಪ ಕಾಲ ಸಮಯ ಕಳೆದು ನಂತರ ಬೈಕ್ ಕದ್ದು ಪರಾರಿ. ನಿಂತಿದ್ದ ಬೈಕ್ ಕದ್ದೋಯ್ಯತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
