Friday, April 18, 2025
Google search engine

Homeರಾಜ್ಯಸುದ್ದಿಜಾಲರಸ್ತೆಗಳಲ್ಲಿ ಬೈಕ್ ವ್ಹೀಲಿಂಗ್: ಯುವಕರು, ಬೈಕ್ ಆಲ್ಟ್ರೇಷನ್ ಮಾಡುವ ಗ್ಯಾರೇಜ್ ಮಾಲೀಕರಿಗೆ ಮಂಡ್ಯ ಎಸ್ ಪಿ...

ರಸ್ತೆಗಳಲ್ಲಿ ಬೈಕ್ ವ್ಹೀಲಿಂಗ್: ಯುವಕರು, ಬೈಕ್ ಆಲ್ಟ್ರೇಷನ್ ಮಾಡುವ ಗ್ಯಾರೇಜ್ ಮಾಲೀಕರಿಗೆ ಮಂಡ್ಯ ಎಸ್ ಪಿ ಖಡಕ್ ಎಚ್ಚರಿಕೆ

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಬೈಕ್ ವ್ಹೀಲಿಂಗ್ ಅವಾಂತರ ಹಿನ್ನಲೆ ಬೈಕ್ ವ್ಹೀಲಿಂಗ್ ಮಾಡುವ ಯುವಕರು ಹಾಗೂ ಆಲ್ಟ್ರೇಷನ್ ಮಾಡುವ ಗ್ಯಾರೇಜ್ ಮಾಲೀಕರಿಗೆ ಮಂಡ್ಯ ಎಸ್ ಪಿ ಎನ್.ಯತೀಶ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಮೈಸೂರು-ಬೆಂಗಳೂರು ಹೆದ್ದಾರಿ ಸೇರಿ ನಗರದಲ್ಲಿ ಪಡ್ಡೆ ಯುವಕರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದರು. ಅಲ್ಲದೆ ಕಳೆದ ವಾರ ಮದ್ದೂರಿನಲ್ಲಿ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡಿ ಕಾರಿಗೆ ಗುದ್ದಿದ್ದ ಯುವಕರು. ಬೈಕ್ ವ್ಹೀಲಿಂಗ್ ನಿಂದ ಸಾಕಷ್ಟು ಅವಾಂತರ ಸೃಷ್ಟಿಸಿದ್ದಾರೆ.

ಈ ಹಿನ್ನಲೆಯಲ್ಲಿ ಯುವಕರ ಪುಂಡಾಟಾಕ್ಕೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದು, ದ್ವಿಚಕ್ರ ವಾಹನಗಳ ಆಲ್ಟ್ರೇಷನ್ ಮಾಡುವ ಮ್ಯಾಕ್ ನಿಕ್ ಗಳ ಜೊತೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿದ್ದು, ಯಾವುದೇ ರೀತಿಯ ಬೈಕ್ ಆಲ್ಟರ್ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯದಲ್ಲಿ ಬೈಕ್ ವ್ಹೀಲಿಂಗ್ ಹುಚ್ಚಾಟ ಹೆಚ್ಚಾಗಿದೆ. ಹಲವು ಪ್ರಕರಣಗಳನ್ನು  ನಾವು ದಾಖಲು ಮಾಡಿದ್ದೇವೆ. ನಗರ ಸೇರಿ ಗ್ರಾಮಾಂತರ ಪ್ರದೇಶಗಳಲ್ಲಿ ಯುವಕರು ಬೈಕ್ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದಾರೆ. ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಯುವಕರು ಬೈಕ್ ವ್ಹೀಲಿಂಗ್ ಮಾಡದಂತೆ ಎಸ್ ಪಿ ಎನ್.ಯತೀಶ್ ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular