Friday, April 18, 2025
Google search engine

Homeರಾಜ್ಯಸುದ್ದಿಜಾಲಬಸ್ ಗೆ ಕಲ್ಲು ತೂರಿದ ಬೈಕ್ ಸವಾರರು: ಕಿಟಕಿ ಗಾಜಿಗೆ ಹಾನಿ- ದೂರು ದಾಖಲು

ಬಸ್ ಗೆ ಕಲ್ಲು ತೂರಿದ ಬೈಕ್ ಸವಾರರು: ಕಿಟಕಿ ಗಾಜಿಗೆ ಹಾನಿ- ದೂರು ದಾಖಲು

ಹುಣಸೂರು: ಸಾರಿಗೆ ಸಂಸ್ಥೆ ಬಸ್ ಗೆ ಹಿಂಬದಿಯಿದ ಬಂದ ಬೈಕ್ ಸವಾರರು ಕಲ್ಲು ತೂರಿದ್ದರಿಂದ ಬಸ್‌ ನ ಕಿಟಕಿ ಗಾಜು ಪುಡಿಪುಡಿಯಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 275ರ ಮಲ್ಲಿನಾಥಪುರದ ಬಳಿ ನಡೆದಿದೆ.

ಮೂಡಿಗೆರೆ ಡಿಪೊಗೆ ಸೇರಿದ ಸಾರಿಗೆ ಸಂಸ್ಥೆಯ ಬಸ್‌ ನ ಕಿಟಕಿ ಗಾಜಿಗೆ ಹಾನಿಯಾಗಿದೆ. ಮೂಡಗೆರೆ, ಹಾಸನ, ಕೆ.ಆರ್.ನಗರ ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ಬಸ್ ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-275ರ ಮಲ್ಲಿನಾಥಪುರ ಬಳಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಬೈಕ್ ಸವಾರರು ಬಸ್‌ ಗೆ ಕಲ್ಲು ಹೊಡೆದು ಕಿಟಕಿ ಗಾಜಿಗೆ ಹಾನಿ ಮಾಡಿದ್ದಾರೆ ಎಂದು ಚಾಲಕ ಲೋಕೇಶ್ ಬಿಳಿಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೈಕ್ ಸವಾರರ ಪತ್ತೆಗೆ ಕ್ರಮ ವಹಿಸಿದ್ದಾರೆ.

RELATED ARTICLES
- Advertisment -
Google search engine

Most Popular