Sunday, April 20, 2025
Google search engine

Homeರಾಜ್ಯಸುದ್ದಿಜಾಲನ.೧೮ರಂದು ರಸ್ತೆ ಸುರಕ್ಷತೆಗಾಗಿ ಬೈಕ್‌ಥಾನ್ ಜಾಗೃತಿ ಜಾಥ

ನ.೧೮ರಂದು ರಸ್ತೆ ಸುರಕ್ಷತೆಗಾಗಿ ಬೈಕ್‌ಥಾನ್ ಜಾಗೃತಿ ಜಾಥ

ಮೈಸೂರು: ನಗರದ ಸ್ವಾಮಿ ವಿವೇಕಾನಂದ ಯೂತ್‌ಮೂಮೆಂಟ್ ಹಾಗೂ ಜೀವರಕ್ಷಕ ಸಂಘದಿಂದ ನ.೧೮ರಂದು ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಬೈಕ್‌ಥನ್ -೨೦೨೩ಅನ್ನು ಆಯೋಜಿಸಲಾಗಿದೆ.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು ಜೀವರಕ್ಷ ತಂಡದ ಮೈಸೂರು ವಿಭಾಗದ ಮುಖ್ಯಸ್ಥೆ ರೇಖಾ ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯ ಎದುರಿನಿಂದ ಬೆಳಗ್ಗೆ.೭.೩೦ಕ್ಕೆ ಬೈಕ್ ರ್‍ಯಾಲಿ ಎಂದರು. ೧೦೮ಕ್ಕೂ ಬೈಕ್‌ಗಳು ಹಾಗೂ ೧೦ ವಿಂಟೇಜ್ ಕಾರುಗಳು ರ್‍ಯಾಲಿಯಲ್ಲಿರಲಿವೆ. ಮಾತ್ರವಲ್ಲದೆ, ಸಂಸ್ಥೆಯ ಮತ್ತೊಂದು ತಂಡ ನ.೧೮ಕ್ಕೆ ವಿಧಾನಸೌದದ ಮುಂಭಾಗದಿಂದ ಬೆಳಗ್ಗೆ ೬ಕ್ಕೆ ಬೈಕ್ಥಾನ್ ತುಮಕೂರಿಗೆ ತೆರಳಿ ಅನಂತರ ೧.೩೦ಕ್ಕೆ ಚಿತ್ರದುರ್ಗದಲ್ಲಿ ಅಂತ್ಯಗೊಳ್ಳಲಿದೆ. ನ.೧೯ಕ್ಕೆ ಹೊಸಪೇಟೆ , ಹಂಪೆಯಲ್ಲಿ ಬೀದಿ ನಾಟಕದ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಮೈಸೂರು ಅಧ್ಯಕ್ಷ ಅರುಣ್ ಬೆಳವಾಡಿ, ರೋಟರಿಯನ್ ಜಸ್ವಂತ್‌ಧರ್, ಡಾ.ದೀಪು, ಮಾಜಿ ಅಧ್ಯಕ್ಷ ರಾಜರಾಮ್,ಇದ್ದರು.

RELATED ARTICLES
- Advertisment -
Google search engine

Most Popular