Tuesday, July 22, 2025
Google search engine

HomeUncategorizedಬಿಕ್ಲು ಶಿವನ್ ಹತ್ಯೆ ಪ್ರಕರಣ: ಎಫ್‌ಐಆರ್‌ನಲ್ಲಿ ಬೈರತಿ ಬಸವರಾಜ್ ಹೆಸರು, ನಾಲ್ವರು ಸುಪಾರಿ ಹಂತಕರು ಬಂಧನ

ಬಿಕ್ಲು ಶಿವನ್ ಹತ್ಯೆ ಪ್ರಕರಣ: ಎಫ್‌ಐಆರ್‌ನಲ್ಲಿ ಬೈರತಿ ಬಸವರಾಜ್ ಹೆಸರು, ನಾಲ್ವರು ಸುಪಾರಿ ಹಂತಕರು ಬಂಧನ

ಬೆಂಗಳೂರು : ರೌಡಿಶೀಟರ್​​ ಬಿಕ್ಲು ಶಿವನ ಪ್ರಕರಣದ ತನಿಖೆ ಚುರುಕು ಪಡೆದಿದೆ. ಮಾಜಿ ಸಚಿವ ಹಾಗೂ ಶಾಸಕ ಬೈರತಿ ಬಸವರಾಜ್​​ ಗೆ ಸಂಕಷ್ಟ ತಂದಿಕ್ಕಿದೆ. ಎಫ್​​ಐಆರ್​​​ನಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್​ ಹೆಸರು ಪ್ರಿಂಟ್​ ಆಯ್ತೋ ಸದ್ಯ ಪ್ರಕರಣಕ್ಕೆ ನೆಕ್ಸ್ಟ್​ ಲೆವೆಲ್​​ನಲ್ಲಿ ಸುದ್ದಿಯಾಗಿದೆ. ಇದ್ರ ಮಧ್ಯೆ ನಾಲ್ವರು ಸುಪಾರಿ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.

ಬಿಕ್ಲು ಶಿವು ಕೊಲೆ ಕೇಸ್‌ನಲ್ಲಿ ನಾಲ್ವರು ಸುಪಾರಿ ಕಿಲ್ಲರ್ಸ್​ನ್ನು ಭಾರತಿನಗರ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಕೋಲಾರದಿಂದ ಬಂದಿದ್ದ ಐವರೇ ಬಿಕ್ಲು ಶಿವನನ್ನು ಮುಗಿಸಿದ್ದರು ಎನ್ನಲಾಗುತ್ತಿದೆ. ಐವರ ಪೈಕಿ ಒಬ್ಬ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಪ್ರಕರಣದ ಬಗ್ಗೆ ತುಂಬಾ ಸೀರಿಯಸ್ ಆಗಿ ತನಿಖೆ ನಡೆಸಲಾಗ್ತಿದೆ. ಮೊದಲು ಐದು ಜನರನ್ನ ಬಂಧಿಸಲಾಗಿತ್ತು, ನಿನ್ನೆ ಇಬ್ಬರನ್ನ ಬಂಧಿಸಲಾಗಿದೆ. ಒಟ್ಟು ಏಳು ಜನರನ್ನ ಬಂಧಿಸಿ ತನಿಖೆ ನಡೆಸಲಾಗ್ತಿದೆ. ಪ್ರಕರಣದ ಹಿಂದೆ ಯಾರಿದ್ದಾರೆ ಅನ್ನೋದ್ರ ಬಗ್ಗೆ ಡೀಟೆಲ್ ಆಗಿ ತನಿಖೆ ನಡೆಸಲಾಗ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಸದ್ಯ ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಸಲಾಗ್ತಿದೆ. ಈ ಮುಂಚೆ ದಾಖಲಾಗಿದ್ದ ಪ್ರಕರಣದ ಬಗ್ಗೆಯೂ ತನಿಖೆ ನಡೆಸಲಾಗುತ್ತೆ. ಪೊಲೀಸ್ ಅಧಿಕಾರಿಗಳ ಲೋಪದ ಬಗ್ಗೆ ಇಲಾಖಾ ತನಿಖೆ ನಡೆಸಲಾಗುತ್ತೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಬಿಕ್ಲು ಶಿವ ಹತ್ಯೆಗೆ ಹುಡುಗರನ್ನು ಸಿದ್ಧಗೊಳಿಸಿದ್ದ ಆರೋಪಿ ಕಿರಣ್
ಬಿಕ್ಲು ಶಿವ ಹತ್ಯೆಯ ತನಿಖೆ ವೇಳೆ ರೋಚಕ ಸಂಗತಿ ಬಯಲಾಗಿದೆ. ಆರೋಪಿ ಕಿರಣ್, ಬಿಕ್ಲು ಹತ್ಯೆಗೆ ಹುಡುಗರನ್ನು ಸಿದ್ಧಗೊಳಿಸಿದ್ದ. ಕನ್ನಡದ ಸ್ಥಳೀಯ ಹುಡುಗರು ಬೇಡ ಎಂದು ಮತ್ತೊಬ್ಬ ಆರೋಪಿ ಪ್ಯಾಟ್ರಿಕ್‌ಗೆ ಹೇಳಿದ್ದ. ಹೀಗಾಗಿ ಪ್ಯಾಟ್ರಿಕ್ ತಮಿಳು ಹುಡುಗರನ್ನು ವ್ಯವಸ್ಥೆ ಮಾಡಿದ್ದ. ಪ್ಯಾಟ್ರಿಕ್ ಹೇಳಿದಂತೆ ಬಿಕ್ಲು ಶಿವನನ್ನ ಪ್ಯಾಟ್ರಿಕ್ ಹಾಗೂ ಸಹಚರರು ಭೀಕರವಾಗಿ ಹತ್ಯೆ ಮಾಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.

RELATED ARTICLES
- Advertisment -
Google search engine

Most Popular