Thursday, April 3, 2025
Google search engine

Homeರಾಜ್ಯಬಿಳಿಗಿರಿರಂಗನಬೆಟ್ಟ ಕಂದಾಯ ಗ್ರಾಮದ ಗೊಂದಲಕ್ಕೆ ಶೀಘ್ರವೇ ಪರಿಹಾರ: ಶಾಸಕ ಎ.ಆರ್.ಕೃಷ್ಣಮೂರ್ತಿ

ಬಿಳಿಗಿರಿರಂಗನಬೆಟ್ಟ ಕಂದಾಯ ಗ್ರಾಮದ ಗೊಂದಲಕ್ಕೆ ಶೀಘ್ರವೇ ಪರಿಹಾರ: ಶಾಸಕ ಎ.ಆರ್.ಕೃಷ್ಣಮೂರ್ತಿ

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟವನ್ನು(Biligiriranganabetta) ಕಂದಾಯ ಗ್ರಾಮವಾಗಿಸುವ(Revenue village) ಸಮಸ್ಯೆಯನ್ನು ಶೀಘ್ರವೇ ಬಗ್ಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತಿದ್ದು, ಈ ಪ್ರಕ್ರಿಯೆಗೆ ಸಂಬAಧಿಸಿದ ಉನ್ನತ ಮಟ್ಟದ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಜೊತೆಗೆ, ಪ್ರಸ್ತುತ ಸಮಸ್ಯೆಯ ಬಗ್ಗೆ ವಿಧಾನಸೌಧದ ನಡೆಯುವ ಕಲಾಪದ ಮುಂದೆ ಪ್ರಸ್ತಾವ ಇಟ್ಟು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಲಾಗುವುದೆಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಭರವಸೆ ನೀಡಿದರು.


ಅವರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇಗುಲಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ೧೯೬೦ರ ದಶಕದಲ್ಲಿ ಬಿಳಿಗಿರಿರಂಗನಬೆಟ್ಟದ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಹಾಗೂ ಗಡಿಭಾಗದ ಪ್ರದೇಶದ ಜಾಗವನ್ನು ಸಾಗುವಳಿ ಮಾಡುವ ನಿಟ್ಟಿನಲ್ಲಿ ಆಗಿನ ಅರಣ್ಯ ಮತ್ತು ಕಂದಾಯ ಸಚಿವರಾಗಿದ್ದ ಬಿ.ರಾಚಯ್ಯರವರು ಪರಿವರ್ತಿಸಿದ್ದರು.

ವಿಶೇಷ ಪೂಜೆ ಸಲ್ಲಿಕೆ :

ಶ್ರೀಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲಮ್ಮ ದೇಗುಲಕ್ಕೆ ಭೇಟಿ ನೀಡಿದ ಶಾಸಕರು, ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಆರ್ಚನೆ ಸೇರಿದಂತೆ ಅನೇಕ ಪೂಜೆ ಕಾರ್ಯಗಳನ್ನು ನೆರವೇರಿಸಿ, ಹರಕೆ ತೀರಿಸಿದರು.

ಆದರೆ ಆ ಜಾಗವನ್ನು ಪಡೆದ ರೈತರು ವ್ಯವಸಾಯವನ್ನು ಮಾಡದೆ ಪಾಳು ಬಿಟ್ಟಿರುವ ಜತೆಗೆ ಕಾಡು ಪ್ರಾಣಿಗಳ ಕಾಟದೊಂದಿಗೆ, ನೀರಿನ ಸಮಸ್ಯೆ ಇರುವುದರಿಂದ ಜಾಗವನ್ನು ಉಳುಮೆಯನ್ನೂ ಸಹ ಮಾಡದೆಬಿಟ್ಟಿದ್ದರು. ಇದರಿಂದ ಆ ಪ್ರದೇಶದಲ್ಲಿ ಗಿಡಮರಗಳು ಬೆಳೆದು ಕಾಡಾಗಿ ಪರಿವರ್ತನೆಯಾಗಿದೆ. ಇದರಿಂದ ಅರಣ್ಯ ಇಲಾಖೆಯು ಈ ಜಾಗವನ್ನು ವಶಪಡಿಸಿಕೊಂಡಿದೆ. ಈ ಕುರಿತು ನೈಜ ಸಾಗುವಳಿ ಪಡೆದುಕೊಂಡಿದ್ದ ರೈತರು ಪ್ರಶ್ನಿಸಲು ಹೋದರೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹಿಂದಿನ ನಕ್ಷೆಯ ಆಧಾರ ಮೇಲೆ ಕಂದಾಯ, ಅರಣ್ಯ, ಸರ್ವೇ ಇಲಾಖೆಗಳೊಂದಿಗೆ ಜಂಟಿ ಸರ್ವೇ ಮಾಡಿಸಿ, ಗಡಿ ಗುರುತಿಸುವ ಕೆಲಸವನ್ನು ಮಾಡಲಾಗುವುದು. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ವಿಧಾನಸೌಧದ ಸದನದಲ್ಲಿ ಈ ಬಗ್ಗೆ ಧ್ವನಿಯೆತ್ತಿ ಪ್ರಸ್ತಾವ ಸಲ್ಲಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷೆ ಕೇತಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊಂಗನೂರು ಚಂದ್ರು, ಪ್ರಧಾನ ಕಾರ್ಯದರ್ಶಿ ಯರಿಯೂರು ಪ್ರಕಾಶ್, ಮುಖಂಡರಾದ ವೆಂಕಟೇಶ್, ಕೃಷ್ಣಪುರ ದೇವರಾಜು, ಬೂದಿತಿಟ್ಟು ಸತೀಶ್, ಬಡಗಲಮೋಳೆ ಚೇತನ್, ಕೆಸ್ತೂರು ಗುರು, ಹೊಂಗನೂರು ಚೇತನ್, ನಂಜುAಡಸ್ವಾಮಿ, ರಾಘವೇಂದ್ರ ಹಾಲಿನ ಮಹದೇವಶೆಟ್ಟಿ, ವಿಶ್ವ, ರವಿ, ದೇಗುಲದ ಇಒ ಮೋಹನ್ ಕುಮಾರ್, ದೇಗುಲದ ಸಿಬ್ಬಂದಿಗಳಾದ ರಾಜಣ್ಣ, ಶೇಷಾದ್ರಿ, ಪೊಲೀಸ್ ಸಿಬ್ಬಂದಿ ಮುರುಳಿ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular