ಮೈಸೂರು: ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಬಸವ ಬಳಗ ಚಾಮುಂಡಿ ಪುರಂ(ರಿ.)ವತಿಯಿಂದ ಆಯೋಜಿಸಲಾಗಿದ್ದ ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿಗಳವರ ಜನ್ಮ ಜಯಂತ್ಯೋತ್ಸವದ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎಂ.ಕೆ ಸೋಮಶೇಖರ್ ರವರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿ ನಂತರ ನೆರೆದಿದ್ದ ನೂರಾರು ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್,ಬಸವ ಬಳಗಗಳ ಒಕ್ಕೂಟದ 2025 ನೇ ಸಾಲಿನ ಅಧ್ಯಕ್ಷರಾದ ನಾಗರಾಜ್,ಸಂಘದ ಅಧ್ಯಕ್ಷರಾದ ಸಂದೀಪ್ ಚಂದ್ರಶೇಖರ್, ಗೌರವಾಧ್ಯಕ್ಷರಾದ ಅಂಬಳೆ ಶಿವಣ್ಣ, ಉಪಾಧ್ಯಕ್ಷರಾದ ಬಸವರಾಜು, ಮುಖಂಡರಾದ ಬಸವರಾಜು, ಮಂಜುನಾಥ್, ಧರ್ಮೇಂದ್ರ, ಯೋಗೇಶ್, ರಾಜೇಂದ್ರ, ಮೋಹನ್, ಶೇಖರ್, ಶಿವಪ್ರಸಾದ್, ಧನುಷ್, ಎಸ್ ಆರ್ ಎಸ್ ಶಿವಕುಮಾರ್, ಪಾರ್ಥಸಾರಥಿ, ದೇವೇಂದ್ರ ಸ್ವಾಮಿ, ಸಂದೇಶ್, ಸತ್ಯ ರಾಜ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.