ಹುಣಸೂರು: ಶಾಸಕ ಜಿ.ಡಿ.ಹರೀಶ್ ಗೌಡರ 38ನೇ ವರ್ಷದ ಹುಟ್ಟುಹಬ್ಬವನ್ನು ಅವರ ಅಭಿಮಾನಿ ಬಳಗ ಹಾಗೂ ಜೆ.ಡಿ.ಎಸ್ ಕಾರ್ಯಕರ್ತರಿಂದ ಸಮಾಜಿಕ ಸೇವಾ ಕಾರ್ಯಕ್ರಮಗಳ ಮೂಲಕ ಸರಳವಾಗಿ ಆಚರಸಿಲಾಗುವುದು ಎಂದು ನಗರಸಭಾ ಸದಸ್ಯ ಹೆಚ್.ಪಿ.ಸತೀಶ್ ಕುಮಾರ್ ಹಾಗೂ ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ಬಸವಲಿಂಗಯ್ಯ ತಿಳಿಸಿದರು.
ನಗರದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜನಪ್ರಿಯ ಶಾಸಕರ ಹುಟ್ಟು ಹಬ್ಬವನ್ನು ಜ.31ರ ಶುಕ್ರವಾರದಂದು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ತಾಲ್ಲೂಕಿನ ಸಾರ್ವಜನಿಕರಿಗೆ ವಿವಿಧ ಸವಲತ್ತುಗಳನ್ನು ವಿತರಿಸುವ ಮೂಲಕ ಆಚರಿಸಲಾಗುತ್ತದೆ. ಹಾಗೂ ನಾಗಪುರ ಹಾಡಿಯಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಿಲಾಗಿದೆ.
ರಾಜ್ಯದಲ್ಲಿ ಆಡಳಿತರೂಢ ಸರ್ಕಾರ ವಿಲ್ಲದಿದರೂ ಸರ್ಕಾರದಿಂದ ವಿಶೇಷ ಅನುದಾನ ತರುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಅಲ್ಲದೇ ಶಾಸಕರು ವೈಯಕ್ತಿಕವಾಗಿ ಶಿಕ್ಷಣ, ಕ್ರೀಡೆ, ಸೇರಿದಂತೆ ಸಂಕಷ್ಟದಲ್ಲಿರುವವರಿಗೆ ವೈಯಕ್ತಿಕ ನೆರವು ನೀಡುವ ಮೂಲಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.ಅಲ್ಲದೇ ಹೋಬಳಿ ಮಟ್ಟದಲ್ಲಿ ತಮ್ಮ ಪ್ರತಿನಿಧಿಗಳನ್ನು
ವೈಯಕ್ತಿಕ ನೆರವುನಿಂದ ನಿಯೋಜಿಸುವ ಮೂಲಕ ಸ್ಥಳೀಯ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸಿವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ಶಾಸಕರು ನನ್ನ ಹುಟ್ಟುಹಬ್ಬಕ್ಕೆ ಯಾರು ಹಾರ ತುರಾಯಿಗಳಿಗೆ ದುಂದು ವ್ಯಚ್ಚ ಮಾಡಿ ಸಂಭ್ರಮಿಸುವ ಬದಲು ಆ ಹಣವನ್ನು ತಾಲೂಕಿನಲ್ಲಿ ಸಂಕಷ್ಟದಲ್ಲಿರುವ ಸಾರ್ವಜನಿಕರ ಸೇವೆಗಾಗಿ ಮುಡುಪಿಡಿ ಎಂಬ ಸಂದೇಶ ನೀಡಿದ್ದಾರೆ.
ವಿಶೇಷ ಕಾರ್ಯಕ್ರಮಗಳು:
ಹುಣಸೂರು ತಾಲೂಕಿನ 35 ಪತ್ರಕರ್ತರಿಗೆ ತಾಲ್ಲೂಕು ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಹಾಗೂ ಧರ್ಮಾಪುರ ನಾರಾಯಣ್ ಮನವಿಗೆ ಸ್ವಂದಿಸಿದ ಶಾಸಕ ಜಿ.ಡಿ. ಹರೀಶ್ ಗೌಡರು 20 ಲಕ್ಷ ವಿಮೆ ಬಾಂಡ್ ಮಾಡಿಸುವ ಮೂಲಕ ಮಾನವಿಯತೆ ಮರೆದಿದ್ದಾರೆ.
ಜ.31ರ ಶುಕ್ರವಾರ ಬೆಳ್ಳಿಗೆ 12 ಗಂಟೆಗೆ ಶಾಸಕರ ಮನೆ ಬಳಿಯ ನಿವೇಶನದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದು, ಶಾಸಕರ ಅಭಿಮಾನಿ ಬಳಗದ ಸದಸ್ಯರಾದ ಹರವೆ ಶ್ರೀಧರ್ ಮತ್ತು ಸತೀಶ್ ಪಾಪಣ್ಣ ರವರಿಂದ ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ 7.5ಲಕ್ಷ ರೂ ವೆಚ್ಚದ ಉಚಿತ ಅಂಬ್ಯೂಲೆನ್ಸ್ (ತುರ್ತು ವಾಹನ ) ಸೇವೆ ಒದಗಿಸಲಿದ್ದಾರೆ. ಅನಾಥ ಶವಗಳನ್ನು ಮಣ್ಣು ಮಾಡುತ್ತಿದ್ದ ಬಿಳಿಕೆರೆ ಮಂಜುವರಿಗೆ ಬಿಳಿಕೆರೆ ಚಿಕನ್ ಮಧುರವರು 3.5 ಲಕ್ಷರೂ ವೆಚ್ಚದ ಆಟೋ ರೀಕ್ಷಾ ಕೊಡುಗೆ ನೀಡಲಿದ್ದಾರೆ. ತಾಲೂಕಿನ 4500 ಎಸ್.ಎಸ್.ಎಲ್ ಸಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಣಣ ತಜ್ಞರಿಂದ ಸಂಗ್ರಹಿಸಿದ 100 ಪುಟಗಳ 6 ಭಾಷೆಗಳ ಪರೀಕ್ಷಾ ಕೈಪಿಡಿ ವಿತರಿಸಲಾಗುತ್ತದೆ.
ಬೀದಿ ಬದಿ ವ್ಯಾಪಾರಿಗಳಿಗೆ, ಅಸಂಘಟಿತ ಮಹಿಳೆಯರಿಗೆ ಟೈಲರಿಂಗ್ ಮಿಷನ್ ಗಳು, ಅಂಗವೈಕಲ್ಯ ಇರುವ ವಿದ್ಯಾರ್ಥಿಗಳಿಗೆ ಮತ್ತು ಇತರರಿಗೆ ಸಲಕರಣೆಗಳು ವಿತರಣೆ, ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಹಾಗೂ ಸಹಾಯಸ್ತ ನೆರವು. 250 ಮಂದಿಗೆ ವಿವಿಧ ರೀತಿಯ ಪಿಚಿಣಿ , ರೈತರಿಗೆ ಸಲಕರಣೆಗಳು, ಉಚಿತ ಕಣ್ಣಿನ ತಪಾಸಣೆ ನಡೆಸಿ ಕನ್ನಡಕ ವಿತರಣೆ ಕಾರ್ಯಕ್ರಮಗಳನ್ನು ಸೇರಿದಂತೆ ಅನೇಕ ರೀತಿಯ ಸಮಾಜಿಕ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸದುಪಯೋಗ ಪಡಿಸಿಕೊಳ್ಳಿ ಎಂದರು .
ಸುದ್ದಿಗೋಷ್ಟಿಯಲ್ಲಿ ತಟ್ಟೆಕೆರೆ ಶ್ರೀ ನಿವಾಸ್, ಬಿಳಿಕೆರೆ ಗೌರಿ ಶಂಕರ್, ಆಸ್ವಾಳ್ ಕೆಂಪೇಗೌಡ, ನಾಗರಾಜು , ಕೊಳಗಟ್ಟ ನಾಗರಾಜ್ ಮುಂತಾದವರು ಇದ್ದರು.