ಮೈಸೂರು:ಅಂತರಾಷ್ಟ್ರೀಯ ಲಯನ್ ಸಂಸ್ಥೆ ಜಿಲ್ಲೆ 317 G ತಿಲಕ್ ನಗರದಲ್ಲಿರುವ ಲಯನ್ಸ್ ಕ್ಲಬ್ ಮೈಸೂರು ಕ್ಲಬ್ಬಿನ ಹಿರಿಯ ಸದಸ್ಯರಾದ ಲಯನ್ ವಿರೂಪಾಕ್ಷ ಅವರ ಮೊಮ್ಮಗನ ಹುಟ್ಟು ಹಬ್ಬದ ಪ್ರಯುಕ್ತ ಮೈಸೂರಿನ ಬನ್ನಿಮಂಟಪದಲ್ಲಿರುವ ಸಾಯಿ ರಂಗ ವಿದ್ಯಾ ಸಂಸ್ಥೆ ( ಕಿವುಡ ಗಂಡು ಮಕ್ಕಳ ವಸತಿ ಶಾಲೆ ) ಯಲ್ಲಿ ಮಕ್ಕಳಿಗೆ ಸಿಹಿ ಹಾಗೂ ಊಟದ ವ್ಯವಸ್ಥೆ ಮಾಡುವ ಮುಖಾಂತರ ಕ್ಲಬ್ಬಿನ ಸದಸ್ಯರು ಹಾಗೂ ಅವರ ಕುಟುಂಬದವರೊಂದಿಗೆ ಆಚರಿಸಲಾಯಿತು. ಕಬ್ಬಿನ ಅಧ್ಯಕ್ಷರಾದ ಲಯನ್ ಬಿ ಭಾರತಿ, ಖಜಾಂಚಿ ಜೆ ಲೋಕೇಶ್, ಲಯನ್ ವಿರೂಪಾಕ್ಷ, ಲಯನ್ ಸಿ ಮೋಹನ್ ಕುಮಾರ್, ಲಯನ್ ಬಿ ಶಿವಣ್ಣ, ಲಯನ್ ಬಿ ಸುರೇಶ್, ಲಯನ್ ಬಿ ರಮೇಶ್,ಲಯನ್ ಮುಕೇಶ್ ಮುಂತಾದವರು ಉಪಸ್ಥಿತರಿದ್ದರು